ಯುನಿಫೈಡ್ ಪೆನ್ಷನ್ ಸ್ಕೀಂ ಯುಪಿಎಸ್ (ಸಂಗ್ರಹ ಚಿತ್ರ) online desk
ಅಂಕಣಗಳು

Unified Pension Scheme ಎಂದರೇನು? ಇದು National Pension Scheme ಗಿಂತ ಹೇಗೆ ವಿಭಿನ್ನ? (ಹಣಕ್ಲಾಸು)

2014 ರಿಂದ UPSನ್ನು ಜನ ಸಾಮಾನ್ಯರಿಗೆ ಕೂಡ ಉಳಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಬಹುತೇಕ ಯೋಜನಗಳು ಎನ್ನಾರೈಗಳನ್ನು ದೂರವಿಡುತ್ತದೆ. ಆದರೆ ಇಲ್ಲಿ ಎನ್ನಾರೈ ಗಳು ಕೂಡ ಉಳಿಸಲು ಅವಕಾಶ ಮಾಡಿಕೊಡಲಾಗಿದೆ. (ಹಣಕ್ಲಾಸು-446)

ಭಾರತದಲ್ಲಿ ಸಾಮಾಜಿಕ ಭದ್ರತೆ ಸರಕಾರದ ವತಿಯಿಂದ ಇಲ್ಲ. ಮುಂದುವರೆದ ದೇಶಗಳಲ್ಲಿ ಪೆನ್ಷನ್, ಹೆಲ್ತ್, ಶಿಕ್ಷಣ ಇತ್ಯಾದಿಗಳ ಹೊಣೆಯನ್ನು ಸರಾಕಾರ ಹೊತ್ತಿದೆ. ಈ ಕಾರಣದಿಂದ ಭಾರತದಲ್ಲಿ ಒಂದಲ್ಲ ಹಲವು ಸಾಮಾಜಿಕ ಭದ್ರತೆ ಒದಗಿಸುವ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನ್ಯಾಷನಲ್ ಪೆನ್ಷನ್ ಸ್ಕೀಮ್ ಅಂತಹ ಯೋಜನೆಗಳಲ್ಲಿ ಒಂದು.

2009 ರಲ್ಲಿ ಇದನ್ನು ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರಿಗೆ ಎಂದು ಜಾರಿಗೆ ತರಲಾಯಿತು. ಇದಕ್ಕೂ ಮೊದಲು ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರಿಗೆ ಸರಕಾರ ನಿವೃತ್ತಿ ವೇತನವನ್ನು ನೀಡುತ್ತಿತ್ತು. 2009 ರ ನಂತರ ಎಲ್ಲಾ ಸರಕಾರಿ ನೌಕರರು ಕಡ್ಡಾಯವಾಗಿ ಇಲ್ಲಿ ಖಾತೆಯನ್ನು ತೆರೆಯಬೇಕು.

2014 ರಿಂದ ಇದನ್ನು ಜನ ಸಾಮಾನ್ಯರಿಗೆ ಕೂಡ ಉಳಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಬಹುತೇಕ ಯೋಜನಗಳು ಎನ್ನಾರೈಗಳನ್ನು ದೂರವಿಡುತ್ತದೆ. ಆದರೆ ಇಲ್ಲಿ ಎನ್ನಾರೈ ಗಳು ಕೂಡ ಉಳಿಸಲು ಅವಕಾಶ ಮಾಡಿಕೊಡಲಾಗಿದೆ.

ಈ OPS ನ ಎಲ್ಲಾ ಖಾತೆಗಳನ್ನು ಪೆನ್ಷನ್ ಫಂಡ್ ರೆಗ್ಯುಲೇಟರಿ & ಡೆವಲಪ್ಮೆಂಟ್ ಅಥಾರಿಟಿ ನಿಯಂತ್ರಿಸುತ್ತದೆ. ಇದೆ ರೀತಿ ಹಲವು ಪೆನ್ಷನ್ ಫಂಡ್ಗಳಿವೆ ಆದರೆ ಎಲ್ಲವನ್ನೂ ನಿಯಂತ್ರಿಸುವ ಒಂದು ರೆಗ್ಯುಲೇಟರಿ ಸಂಸ್ಥೆ ಭಾರತದಲ್ಲಿ ಇಲ್ಲ. ಆಯಾ ಫಂಡ್ಗಳನ್ನು ಅಲ್ಲಿಗೆ ಸಂಬಂಧಿಸಿದ ಸಂಸ್ಥೆಗಳು ನಿಯಂತ್ರಿಸುತ್ತವೆ.

ನ್ಯಾಷನಲ್ ಪೆನ್ಷನ್ ಯೋಜನೆಯಲ್ಲಿ ತಿಂಗಳಿಗೆ ಇಷ್ಟು ನಿವೃತ್ತಿ ವೇತನವನ್ನು ನೀಡುತ್ತೇವೆ ಎನ್ನುವ ಯಾವುದೇ ಭರವಸೆ ನೀಡುವುದಿಲ್ಲ. ಬದಲಿಗೆ ಉಳಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಮತ್ತು ಆ ಹೂಡಿಕೆ ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ ಎನ್ನುವುದರ ಮೇಲೆ ಇದು ನಿರ್ಧಾರವಾಗುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ವಿವರವಾಗಿ ನೋಡೋಣ.

OPS ನಲ್ಲಿ ಎರಡು ವಿಧವಾದ ಖಾತೆಯನ್ನು ತೆರೆಯಬಹುದಾಗಿದೆ.

1. ಟೈರ್ 1 ಖಾತೆ: ಈ ಖಾತೆಯಲ್ಲಿ ನಿವೃತ್ತಿಗಾಗಿ ಹಣವನ್ನು ಸಂಗ್ರಹಿಸಲಾಗುತ್ತದೆ. ಈ ಕಾರಣದಿಂದ ಇಲ್ಲಿನ ಹಣವನ್ನು ಸಾಮಾನ್ಯವಾಗಿ ನಿವೃತ್ತಿಯ ತನಕ ಮುಟ್ಟಲು ಬಾರದು. ಆದರೆ ಕೆಲವೊಂದು ತುರ್ತು ಸಮಯದಲ್ಲಿ ಇಲ್ಲಿನ ಹಣವನ್ನು ಹೊರ ತೆಗೆಯಬಹುದು. ಕೆಲಸದ ಪೂರ್ಣ ವರ್ಷಗಳು ಇಲ್ಲಿ ಹಣವನ್ನು ಉಳಿಸುತ್ತಾ ಬಂದು ನಿವೃತ್ತಿಯ ಸಮಯದಲ್ಲಿ ಎಷ್ಟು ಹಣ ಸಂಗ್ರಹವಾಗಿರುತ್ತದೆ ಅದರಲ್ಲಿ 40 ಪ್ರತಿಶತ ಹಣವನ್ನು ಆನ್ಯೂಟಿ ಕೊಳ್ಳಲು ಬಳಸಲಾಗುತ್ತದೆ. ಅದರಲ್ಲಿ ಬರುವ ಬಡ್ಡಿಯನ್ನು ಪೆನ್ಷನ್ ರೀತಿಯಲ್ಲಿ ನೀಡಲಾಗುತ್ತದೆ. ಉಳಿದ 60 ಪ್ರತಿಶತ ಹಣವನ್ನು ಖಾತೆದಾರ ವಿಥ್ಡ್ ಡ್ರಾ ಮಾಡಿಕೊಂಡು ಬೇಕಾದ ಕಡೆಯಲ್ಲಿ ಹೂಡಿಕೆ ಮಾಡಬಹುದು ಅಥವಾ ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಈ 60 ಪ್ರತಿಶತ ಹಣದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. 40 ಪ್ರತಿಶತ ಹಣ ಆನ್ಯೂಟಿ ಕೊಳ್ಳಲು ಬಳಸಲಾಗುತ್ತದೆ ಇದರಿಂದ ಬರುವ ಹಣವನ್ನು ಪೆನ್ಷನ್ ರೂಪದಲ್ಲಿ ನೀಡಲಾಗುತ್ತದೆ. ಈ ಪೆನ್ಷನ್ ತೆರಿಗೆ ಲೆಕ್ಕಕ್ಕೆ ಬರುತ್ತದೆ. ಇದನ್ನು ಉದಾಹರಣೆ ಮೂಲಕ ನೋಡೋಣ .

ರಾಮ ಎನ್ನುವವರು ಇಲ್ಲಿ ಉಳಿಸುತ್ತ ಬಂದ ಕಾರಣ ಒಟ್ಟು ಒಟ್ಟು ಒಂದು ಕೋಟಿ ರೂಪಾಯಿ ಹಣ ಖಾತೆಯಲ್ಲಿ ನಿವೃತ್ತಿ ಸಮಯದಲ್ಲಿ ಜಮಾ ಆಗಿದೆ ಎಂದುಕೊಳ್ಳೋಣ. ಆಗ 40 ಪ್ರತಿಶತ ಅಂದರೆ 40 ಲಕ್ಷ ರೂಪಾಯಿಯನ್ನು ಆನ್ಯೂಟಿ ಕೊಳ್ಳಲು ಬಳಸಲಾಗುತ್ತದೆ. ಇದರಲ್ಲಿನ ಬಡ್ಡಿ ದರ 2024 ರಲ್ಲಿ 6.2 ಇದೆ. ಈ ಲೆಕ್ಕಾಚಾರದಲ್ಲಿ ಮಾಸಿಕ 20,600/- ರೂಪಾಯಿಯನ್ನು ನಿವೃತ್ತಿ ವೇತನ ಎಂದು ನೀಡಲಾಗುವುದು. ಉಳಿದ 60 ಲಕ್ಷ ರೂಪಾಯಿ ಖಾತೆದಾರ ತನ್ನಿಚ್ಚೆಗೆ ತಕ್ಕಂತೆ ಬಳಸಿಕೊಳ್ಳಬಹುದು. ಆನ್ಯೂಟಿ ಎಂದರೆ ನಿಗದಿತ ಹಣವನ್ನು ಇರಿಸಿ ಪ್ರತಿ ತಿಂಗಳೂ ನಿಗದಿತ ಹಣವನ್ನು ಪಡೆದುಕೊಳ್ಳುವುದು. ಹೆಚ್ಚು ಕಡಿಮೆ ಫಿಕ್ಸೆಡ್ ಡೆಪಾಸಿಟ್ ರೀತಿಯಲ್ಲಿ ಇದು ಕೆಲಸ ಮಾಡುತ್ತದೆ.

2. ಟೈರ್ 2 ಖಾತೆ: ಇಲ್ಲಿ ಯಾವುದೇ ನಿಬಂಧನೆ ಇಲ್ಲ. ಯಾವಾಗ ಬೇಕಾದರೂ ಹಣವನ್ನು ಮರಳಿ ಪಡೆದುಕೊಳ್ಳಬಹುದು. ಆದರೆ ಈ ಖಾತೆಯನ್ನು ಟೈರ್ 1 ಖಾತೆ ತೆರೆದ ನಂತರ ಮಾತ್ರ ತೆರೆಯಲು ಅವಕಾಶವಿದೆ. ಹೀಗಾಗಿ ಇಲ್ಲಿ ಸಂಗ್ರಹವಾದ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಪೂರ್ಣ ನಿರ್ಧಾರ ಖಾತೆದಾರನ ಕೈಲಿರುತ್ತದೆ.

ಮೇಲೆ ಹೇಳಿದ ಎರಡೂ ಖಾತೆಗಳನ್ನು ಪೆನ್ಷನ್ ಫಂಡ್ ಮ್ಯಾನೇಜರ್ಸ್ ಗಳ ಮೂಲಕ ತೆರೆಯಬಹುದು. ಇಂತಹ ಫಂಡ್ ಮ್ಯಾನೇಜರ್ಸ್ ಗಳನ್ನು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA) ನೇಮಿಸತ್ತದೆ. ಹೀಗಾಗಿ ಈ ಫಂಡ್ ಮ್ಯಾನೇಜರ್ ಗಳನ್ನು ಬಿಟ್ಟು ಬೇರೆಡೆ ಈ ಖಾತೆಯನ್ನು ತೆರೆಯಲು ಬರುವುದಿಲ್ಲ.

ಮೇಲಿನ ಎರಡೂ ಖಾತೆದಾರರಿಗೂ ತಮ್ಮ ಹಣವನ್ನು ಯಾವ ಫಂಡ್ ಮ್ಯಾನೆಜರ್ ಬಳಿ ಮತ್ತು ಯಾವ ಫಂಡ್ ಮೇಲೆ ಹೂಡಿಕೆ ಮಾಡಬೇಕು ಎನ್ನುವ ಆಯ್ಕೆಯನ್ನು ಮಾಡಿಕೊಳ್ಳುವ ಸ್ವಂತAತ್ರ‍್ಯವನ್ನು ನೀಡಿದೆ. ಒಮ್ಮೆ ಫಂಡ್ ಮ್ಯಾನೇಜರ್ ಆಯ್ಕೆ ಮಾಡಿಕೊಂಡ ಮೇಲೆ ಖಾತೆದಾರನಿಗೆ ಮತ್ತೆ ಆಯ್ಕೆ ಎದುರಾಗುತ್ತದೆ. ಒಂದು ಆಕ್ಟಿವ್ ಇನ್ವೆಸ್ಟ್ಮೆಂಟ್ ಅಪ್ಷನ್ . ಎರಡು ಆಟೋ ಇನ್ವೆಸ್ಟ್ಮೆಂಟ್ ಅಪ್ಷನ್ . ಷೇರು ಮಾರುಕಟ್ಟೆ ಹೇಗೆ ವರ್ತಿಸುತ್ತದೆ , ಅಸೆಟ್ ಕ್ಲಾಸ್ ಎಂದರೇನು , ಹೂಡಿಕೆಯ ಅಪಾಯಗಳೇನು ? ಹೀಗೆ ಹೂಡಿಕೆಯ ಬಗ್ಗೆ ತಿಳುವಳಿಕೆ ಇದ್ದವರು ಆಕ್ಟಿವ್ ಇನ್ವೆಸ್ಟ್ಮೆಂಟ್ ಬಳಸಬಹುದು. ಅಂದರೆ ಎಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಬಹುದು. ಎರಡನೇ ಅಪ್ಷನ್ ಆಟೋ , ಮಾರುಕಟ್ಟೆ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದವರು ಬಳಸಬಹುದು. ಇಲ್ಲಿ ಫಂಡ್ ಮ್ಯಾನೇಜರ್ ಗಳು ಎಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

ಯುನಿಫೈಡ್ ಪೆನ್ಷನ್ ಸ್ಕೀಮ್:

ಇದು ಏಪ್ರಿಲ್ 2025 ರಿಂದ ಜಾರಿಗೆ ಬರಲಿದೆ. ಇದು ಕೇವಲ ಕೇಂದ್ರ ಸರಕಾರದ ಕೆಲಸಗಾರರಿಗೆ ಮಾತ್ರ ಅನ್ವಯ. ರಾಜ್ಯ ಸರಕಾರಗಳು ಬೇಕಿದ್ದಲ್ಲಿ ಇದನ್ನು ಜಾರಿಗೆ ತರಬಹುದು. ಇಲ್ಲಿ ಕನಿಷ್ಠ 25 ವರ್ಷ ಕೆಲಸ ಮಾಡಿ ನಿವೃತ್ತಿ ಪಡೆದುಕೊಂಡವರಿಗೆ ಕೊನೆಯ 12ತಿಂಗಳ ಬೇಸಿಕ್ ವೇತನದ ಸರಾಸರಿ 50 ಪ್ರತಿಶತವನ್ನು ನಿವೃತ್ತಿ ವೇತನ ಎಂದು ನೀಡಲಾಗುತ್ತದೆ. ನೆನಪಿರಲಿ ಇದು ಕನಿಷ್ಠ. ಇದು ಹೆಚ್ಚು ಕೂಡ ಆಗಬಹುದು. ಹೀಗೆ ಕನಿಷ್ಠ 10 ವರ್ಷ ಕೆಲಸ ಮಾಡಿದವರಿಗೆ ಕೂಡ ಕನಿಷ್ಠ 10 ಸಾವಿರ ರೂಪಾಯಿ ತಿಂಗಳಿಗೆ ನಿವೃತ್ತಿ ವೇತನ ನೀಡಲಾಗುತ್ತದೆ. ಗಮನಿಸಿ ಓPS ಎಲ್ಲರೂ ಹೂಡಿಕೆ ಮಾಡಬಹುದಿತ್ತು ಮತ್ತು ಅಲ್ಲಿ ನಿವೃತ್ತಿ ವೇತನ ಇಷ್ಟು ಕನಿಷ್ಠ ಸಿಗುತ್ತದೆ ಎನ್ನುವ ಗ್ಯಾರಂಟಿ ಇರಲಿಲ್ಲ. UPS ಕೇವಲ ಕೇಂದ್ರ ಸರಕಾರಿ ನೌಕರರಿಗೆ ಮಾತ್ರ ಮತ್ತು ಇಲ್ಲಿ ಕನಿಷ್ಠ ನಿವೃತ್ತಿ ವೇತನ ಗ್ಯಾರಂಟಿಯಿದೆ. ಈ ರೀತಿ ವೇತನವನ್ನು ಪಡೆದುಕೊಳ್ಳಲು ನೌಕರರು ಬೇಸಿಕ್ ಮತ್ತು ಡಿಯರ್ನೆಸ್ ಅಲ್ಲೋನ್ಸ್ ನ 10 ಪ್ರತಿಶತ ಈ ಸ್ಕೀಮಿನಲ್ಲಿ ಪ್ರತಿ ತಿಂಗಳೂ ಹಣ ತೊಡಗಿಸಬೇಕು. ಸರಕಾರ 18.5 ಪ್ರತಿಶತ ನೌಕರರ ಪರವಾಗಿ ಹೂಡಿಕೆ ಮಾಡುತ್ತದೆ.

ಕೇವಲ ಕೇಂದ್ರ ಸರಕಾರಿ ನೌಕರರು ಮಾತ್ರ ಇಲ್ಲಿಗೆ ತಮ್ಮ ಖಾತೆಯನ್ನು OPS ನಿಂದ ವರ್ಗಾವಣೆ ಮಾಡಿಕೊಳ್ಳಬಹುದು. ಅದು ಕೂಡ ಕಡ್ಡಾಯವಲ್ಲ. ಬೇಕಿದ್ದಲ್ಲಿ ವರ್ಗಾವಣೆ ಮಾಡಿಕೊಳ್ಳಬಹುದು. ಇಲ್ಲವೇ OPS ನಲ್ಲಿ ಹೂಡಿಕೆ ಮುಂದುವರಿಸಬಹುದು. ಇದು ಬೇರೆ OPS ಹೂಡಿಕೆದಾರರಿಗೆ ಇದು ಯಾವ ರೀತಿಯಲ್ಲೂ ಅನ್ವಯವಾಗುವುದಿಲ್ಲ. ಹೀಗಾಗಿ ಅವರು ಅಲ್ಲಿನ ಹೂಡಿಕೆಯನ್ನು ಮುಂದುವರಿಸಬಹುದು. ವರ್ಗಾವಣೆ ಮಾಡಿಕೊಳ್ಳಲು ಬಯಸುವವರು ಮೊದಲು ಇದರ ಬಗ್ಗೆ ಏಪ್ರಿಲ್ 1,2025 ರ ಒಳಗೆ ನಿಖರ ನಿರ್ಧಾರ ಮಾಡಬೇಕು. ಏಕೆಂದರೆ ಒಮ್ಮೆ ಈ ಸ್ಕೀಮ್ ಆಯ್ದು ಕೊಂಡ ನಂತರ ಮರಳಿ OPS ಸ್ಕೀಮ್ ಗೆ ಹೋಗಲು ಸಾಧ್ಯವಿಲ್ಲ.

ಕೊನೆಮಾತು: ಮಾರುಕಟ್ಟೆಯ ರಿಸ್ಕ್ ಎದುರಿಸಿ ಹೆಚ್ಚಿನ ಆದಾಯವನ್ನು ಪಡೆಯಲು ಬಯಸುವವರು NPS ನಲ್ಲಿ ಮುಂದುವರಿಯಬಹುದು. ಗ್ಯಾರಂಟಿ ಮೊತ್ತವನ್ನು ಬಯಸುವವರು uಠಿs ಸ್ಕೀಮ್ ಆಯ್ದು ಕೊಳ್ಳಬಹುದು. ಸರಳವಾಗಿ ಹೇಳಬೇಕೆಂದರೆ ಇದು ಸರಕಾರಿ ನೌಕರರಿಗೆ ವರದಾನ. ಹೀಗಾಗಿ ಸರಕಾರಿ ನೌಕರರು ಇಲ್ಲಿಗೆ ಸ್ವಿಚ್ ಮಾಡಿಕೊಳ್ಳಬಹುದು. ಇಲ್ಲಿ ಇಂತಿಷ್ಟು ಹಣ ಕನಿಷ್ಠ ಸಿಗುತ್ತದೆ ಎನ್ನುವ ನಿಖರತೆ ಇರುವ ಕಾರಣ ಮತ್ತು ಜಗತ್ತು ವೇಗವಾಗಿ ಬದಲಾಗುತ್ತಿರುವ ಕಾರಣ ಬಡ್ಡಿದರಗಳು ಕಡಿಮೆಯಾಗುವ ಸಾಧ್ಯತೆಗಳು ಕೂಡ ಇರುವ ಕಾರಣ ಸರಕಾರಿ ನೌಕರರು ಇಲ್ಲಿಗೆ ವರ್ಗಾವಣೆ ಮಾಡಿಕೊಳ್ಳುವುದು ಉತ್ತಮ. ಮೇಲೆ ಸೂಚಿಸಿದ ಸಂಖ್ಯೆ ಕನಿಷ್ಠ ಅದು ಹೆಚ್ಚಾಗುವ ಸಾಧ್ಯತೆ ಇದ್ದೆ ಇರುತ್ತದೆ. ಹೀಗಾಗಿ ಇದು ಮುಕ್ಕಾಲು ಪಾಲು ಕೇಂದ್ರ ಸರಕಾರದ ನೌಕರರಿಗೆ ಲಾಭದಾಯಕವಾಗುತ್ತದೆ. ಕೇಂದ್ರ ಸರಕಾರದ ನೌಕರರಲ್ಲದವರಿಗೆ ಇದು ಲಾಗೂ ಆಗುವುದಿಲ್ಲ. ಹೀಗಾಗಿ ಇದರ ಬಗ್ಗೆ ಹೆಚ್ಚು ಚಿಂತಿಸದೆ OPS ನಲ್ಲಿ ಹೂಡಿಕೆ ಮುಂದುವರೆಸುವುದು ಉತ್ತಮ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT