ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಗೂ ಇಂಗ್ಲೆಂಡ್ ನ ಜಿಮ್ ಲೇಕರ್ ಟೆಸ್ಟ್ ಕ್ರಿಕೆಟ್ ನಲ್ಲಿ 10 ವಿಕೆಟ್ ಪಡೆದ ಸಾಧನೆಯನ್ನು ಮಧ್ಯಪ್ರದೇಶದ ಯುವ ಸ್ಪಿನ್ನರ್ ಪಾಲಾಶ್ ಕೊಚಾರ್ ಸಮಗಟ್ಟಿದ್ದಾರೆ.
ಡಿವಿಷನಲ್ ಮಹರಾಜಾ ಯಶವಂತರಾವ್ ಸ್ಮಾರಕ ಟ್ರೋಫಿ ಪಂದ್ಯದಲ್ಲಿ ಸರ್ಮದಾಪುರ ತಂಡದ ವಿರುದ್ಧ ಲೆಗ್ ಸ್ಪಿನ್ನರ್ ಕೊಚಾರ್ ಈ ಸಾಧನೆ ಮಾಡಿದ್ದಾರೆ. ಕ್ಲಬ್ ಕ್ರಿಕೆಟ್ ನ ಇತಿಹಾಸದಲ್ಲಿ ಈವರೆಗೂ ಯಾರೊಬ್ಬರೂ 10 ವಿಕೆಟ್ ಪಡೆದ ಉದಾಹರಣೆ ಇಲ್ಲ.
ಪಂದ್ಯದಲ್ಲಿ ಕೊಚಾರ್ ಒಟ್ಟು 28.1 ಓವರ್ ಗಳು ಬೌಲಿಂಗ್ ಮಾಡಿದ್ದ 53 ರನ್ ಗಳನ್ನು ನೀಡಿ 10 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 10 ಮೇಡನ್ ಓವರ್ ಗಳನ್ನು ಮಾಡಿದ್ದಾರೆ.