ಕ್ರಿಕೆಟಿಗ ಕರುಣ್ ನಾಯರ್ ಹಾಗೂ ಅವರ ಪೋಷಕರು 
ಕ್ರಿಕೆಟ್

ಸ್ವರ್ಗದಲ್ಲಿರುವಂತೆ ಭಾಸವಾಗುತ್ತಿದೆ: ಕರುಣ್ ತ್ರಿಶತಕಕ್ಕೆ ಪೋಷಕರ ಸಂತಸ

ನಮ್ಮ ತ್ರಿಶತಕ ಬಾರಿಸುತ್ತಾನೆಂದು ಚಿಂತಿಸರಲಿಲ್ಲ. ಮಗನ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ ಎಂದು ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶಕತ ಬಾರಿಸಿ ಐತಿಹಾಸಿಕ ದಾಖಲೆ ಬರೆದಿರುವ ಕನ್ನಡಿಗ ಕರುಣ್ ನಾಯರ್ ಅವರ...

ಚೆನ್ನೈ: ನಮ್ಮ ತ್ರಿಶತಕ ಬಾರಿಸುತ್ತಾನೆಂದು ಚಿಂತಿಸರಲಿಲ್ಲ. ಮಗನ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತಿದೆ ಎಂದು ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶಕತ ಬಾರಿಸಿ ಐತಿಹಾಸಿಕ ದಾಖಲೆ ಬರೆದಿರುವ ಕನ್ನಡಿಗ ಕರುಣ್ ನಾಯರ್ ಅವರ ಪೋಷಕರು ಹೇಳಿದ್ದಾರೆ.

ಮಗನ ದಾಖಲೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕರುಣ್ ಅವರು ತಂದೆ ಕಲಾಧರನ್ ನಾಯರ್ ಅವರು, ನನ್ನ ಮಗ ತ್ರಿಶತಕ ಬಾರಿಸುತ್ತಾನೆಂದು ಚಿಂತಿಸಿರಲಿಲ್ಲ. ಮಗನ ಸಾಧನೆ ಕುರಿತು ಹೆಮ್ಮೆಯೆನಿಸುತ್ತಿದೆ. ಕ್ರಿಕೆಟ್ ಆರಂಭವಾದಾಗ ಇಷ್ಟೊಂದು ಸ್ಕೋರ್ ಕರೆ ಹಾಕುತ್ತಾನೆಂದು ಆಲೋಚಿಸಿರಲಿಲ್ಲ. ಆತ 200 ರನ್ ಮಾಡಿದಾಗಲೂ ತ್ರಿಶತಕ ದಾಖಲಿಸುತ್ತಾನೆಂದು ಚಿಂತಿಸಿರಲಿಲ್ಲ. ಪರಿಶ್ರಮದಿಂದಲೇ ಆತ ಸಾಧನೆ ಮಾಡಿದ್ದಾನೆ. ಚಿಕ್ಕ ಮಗುವಿದ್ದಾಗಿನಿಂದಲೂ ಶ್ರಮ ಪಡುತ್ತಿದ್ದ. ಸಾಧನೆಯ ಹಾದಿ ತುಳಿದಿದ್ದಾನೆಂದು ಹೇಳಿದ್ದಾರೆ.

ಕ್ರಿಕೆಟ್ ಬಹಗ್ಗೆ ಕರುಣ್ ಗೆ ನಾವು ಎಂದಿಗೂ ಯಾವುದೇ ಸಲಹೆಗಳನ್ನು ನೀಡಿರಲಿಲ್ಲ. ಅವನು ಏನೇ ಮಾಡಿದರೂ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದೆವು ಎಂದು ತಿಳಿಸಿದ್ದಾರೆ.

ಇದರಂತೆ ಕರುಣ್ ಅವರ ತಾಯಿ ಪ್ರೇಮಾ ನಾಯರ್ ಅವರೂ ಕೂಡ ಪ್ರತಿಕ್ರಿಯೆ ನೀಡಿದ್ದು, ಮಗನ ಸಾಧನೆಗೆ ಹೆಮ್ಮೆಯಾಗುತ್ತಿದೆ. ಆತನ ಸಾಧನೆಯಿಂದಾಗಿ ನನಗೆ ಸ್ವರ್ಗದಲ್ಲಿರುವಂತಹ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT