ಆರ್ ಅಶ್ವಿನ್-ಧೋನಿ 
ಕ್ರಿಕೆಟ್

ಅಶ್ವಿನ್ ವಿರುದ್ಧ ಧೋನಿ ಅಭಿಮಾನಿಗಳು ಗರಂ ಕಾರಣ ಏನು ಗೊತ್ತೆ!

ಟೀಂ ಇಂಡಿಯಾದ ಕೇರಂ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಭಾರತದ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ...

ಬೆಂಗಳೂರು: ಟೀಂ ಇಂಡಿಯಾದ ಕೇರಂ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಭಾರತದ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ. 
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಶ್(ಐಸಿಸಿ) ವಾರ್ಷಿಕ ಪ್ರಶಸ್ತಿಗಳಲ್ಲಿ ಡಬಲ್ ಸಾಧನೆ ಮಾಡಿದ ಬಳಿಕ ಅಶ್ವಿನ್ ಧನ್ಯವಾದ ಭಾಷಣ ಮಾಡಿದರು. ಆದರೆ ಭಾಷಣದಲ್ಲಿ ಎಂಎಸ್ ಧೋನಿ ಹೆಸರನ್ನು ಪ್ರಸ್ತಾಪಿಸದೆ ವಿರಾಟ್ ಕೊಹ್ಲಿ ಹೆಸರನ್ನು ಹೆಚ್ಚಾಗಿ ಪ್ರಸ್ತಾಪಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಶ್ವಿನ್ ಅವರನ್ನು ಧೋನಿ ಅಭಿಮಾನಿಗಳು ಟೀಕಿಸಿದ್ದಾರೆ. 
2011ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ದಿನದಿಂದಲೂ ಅಶ್ವಿನ್ ರ ಕ್ರಿಕೆಟ್ ಜೀವನದ ಪ್ರಗತಿಯಲ್ಲಿ ಧೋನಿ ಮಹತ್ವದ ಪಾತ್ರ ವಹಿಸಿದ್ದಾರೆ. 2014ರಲ್ಲಿ ಐಪಿಎಲ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಮಾನತಾಗುವವರೆಗೂ ಧೋನಿ ಮೊದಲ ಆಯ್ಕೆ ಸ್ಪಿನ್ನರ್ ಆಗಿ ಅಶ್ವಿನ್ ಇದ್ದರು. ಇಷ್ಟಾದರೂ ಧೋನಿ ಹೆಸರನ್ನು ಅಶ್ವಿನ್ ಪ್ರಸ್ತಾಪಿಸದೆ ಇರುವುದು ಧೋನಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ. 
ಯಾರಿಂದ ತಮ್ಮ ಕ್ರಿಕೆಟ್ ಜೀವನ ಆರಂಭವಾಯಿತೋ ಯಾರಿಂದ ನಿಮ್ಮ ಕ್ರೀಡಾ ಜೀವನ ಯಶಸ್ಸಿನ ದಾರಿ ಹಿಡಿಯಿತೋ ಆ ವ್ಯಕ್ತಿಯನ್ನು ನೀವು ಅಲಕ್ಷ್ಯ ಮಾಡುತ್ತಿದ್ದೀರಿ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರದ ಫಲಿತಾಂಶ ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ 'ರಹದಾರಿ': ಪ್ರಧಾನಿ ಮೋದಿ ಮಾತಿನ ಮರ್ಮವೇನು?

ಟಿ20 ವಿಶ್ವಕಪ್ 2026 ನಿಂದ ಶುಭ್ಮನ್ ಗಿಲ್ ಕೈಬಿಟ್ಟಿದ್ದೇಕೆ?: ಅಜಿತ್ ಅಗರ್ಕರ್ ಕೊಟ್ರು ಕಾರಣ

ಹಿಂದೂ ಯುವಕನ ಬರ್ಬರ ಹತ್ಯೆ: ವ್ಯಾಪಕ ಆಕ್ರೋಶ ಬೆನ್ನಲ್ಲೆ 7 ಆರೋಪಿಗಳನ್ನು ಬಂಧಿಸಿದ್ದಾಗಿ ಯೂನಸ್ ಘೋಷಣೆ

ಟಿ-20 ವಿಶ್ವಕಪ್: ಭಾರತ ತಂಡ ಪ್ರಕಟ, ಶುಭ್ ಮನ್ ಗಿಲ್ ಗೆ ಕೊಕ್‌, ಇಶಾನ್ ಕಿಶಾನ್ ಗೆ ಸ್ಥಾನ!

ಕಲಬುರಗಿ: ಉದ್ಯಮಿ ಮಲ್ಲಿನಾಥ್ ಬಿರಾದಾರ್ ಮನೆ ಬಳಿ ಬೆಂಕಿ ಹಚ್ಚಿಕೊಂಡು BJP ಕಾರ್ಯಕರ್ತೆ ಆತ್ಮಹತ್ಯೆ

SCROLL FOR NEXT