ರಾಂಚಿ: ತಮ್ಮ ಹೆಲಿಕಾಫ್ಟರ್ ಶಾಟ್ ಗಳ ಮೂಲಕ ಪ್ರಸಿದ್ಧಿಯಾಗಿರುವ ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಇದೀಗ ಸಿಂಪಲ್ಲಾಗಿ ಕೇಶವಿನ್ಯಾಸ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ.
ಹೊಸ ಬಗೆಯ ಕೇಶವಿನ್ಯಾಸ ಎಂಎಸ್ ಧೋನಿಗೆ ಹೊಸದೇನಲ್ಲ ಈ ಹಿಂದೆ ವಿಭಿನ್ನ ಹೇರ್ ಸ್ಟೈಲ್ ಗಳ ಮೂಲಕ ಸುದ್ದಿಯಾಗಿದ್ದರು. ಇದೀಗ ಸಿಂಪಲ್ಲಾದ ಕೇಶ ವಿನ್ಯಾಸ ಮಾಡಿಸಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಧೋನಿ ಅಭಿಮಾನಿಗಳು ದಂದಾಗುವಂತೆ ಮಾಡಿದೆ.
ಇದುವರೆಗೂ ಧೋನಿ ಯಾವುದೋ ದುಬಾರಿ ಸಲೂನ್ ಗಳಲ್ಲಿ ಕೇಶವಿನ್ಯಾಸ ಮಾಡಿಸುತ್ತಿದ್ದರು ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಧೋನಿ ಫೇಸ್ ಬುಕ್ ನಲ್ಲಿ ಪ್ರಕಟಿಸಿರುವ ಈ ಚಿತ್ರದಲ್ಲಿ ಅವರು ತಮ್ಮ ಮನೆಯಲ್ಲೇ ಕೂದಲು ಕಟ್ ಮಾಡಿಸಿಕೊಳ್ಳುತ್ತಿರುವಂತೆ ಕಂಡುಬಂದಿದೆ.
ಸಾಮಾನ್ಯನಂತೆ ಕೂತು ಹೇರ್ ಕಟ್ ಮಾಡಿಸಿಕೊಳ್ಳುತ್ತಿರುವುದಕ್ಕೆ ಧೋನಿ ಅಭಿಮಾನಿಗಳು ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಗೆ ಹೋಲಿಸಿ ತಲೈವರ್ ಎಂದು ಬಣ್ಣಿಸುತ್ತಿದ್ದಾರೆ.