ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಪಾಕಿಸ್ತಾನ ಅಂಪೈರ್ ಅಲೀಮ್ ಪುತ್ರನಿಗೆ ಕೊಹ್ಲಿ ಹೃದಯಸ್ಪರ್ಶಿ ಸಂದೇಶ

ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಂಪೈರ್...

ವಿರಾಟ್ ಕೊಹ್ಲಿ
Vishwanath S
Updated On : 29 Jul 2016, 11:34 am

ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಂಪೈರ್ ಆಗಿರುವ ಅಲೀಮ್ ದಾರ್ ಪುತ್ರ ಸಹ ನಾನು ವಿರಾಟ್ ಕೊಹ್ಲಿ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾನೆ.

ಅಲೀಮ್ ದಾರ್ ಪುತ್ರ ಹಸನ್ ದಾರ್ ತಮ್ಮ ಅಭಿಮಾನಿ ಎಂದು ತಿಳಿದ ವಿರಾಟ್ ಕೊಹ್ಲಿ ಹಸನ್ ಗೆ ಸ್ಪೂರ್ತಿದಾಯಕ ಸಂದೇಶವನ್ನು ನೀಡಿದ್ದಾರೆ. ಕಠಿಣ ಪರಿಶ್ರಮ ಮ್ತತು ಸಮರ್ಪಣೆ ಮನೋಭಾವ ಕ್ರಿಕೆಟ್ ಕೌಶಲ ವೃದ್ಧಿಗೆ ಪ್ರಮುಖ ಅಂಶಗಳು ಇದು ನಿಮ್ಮ ಕ್ರಿಕೆಟ್ ಬದುಕನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಕಳುಹಿಸಿದ್ದಾರೆ.

ಇದೇ ವೇಳೆ ಕೊಹ್ಲಿ ಹಸನ್ ಗೆ ತಮ್ಮ ಸಹಿ ಇರುವ ಬ್ಯಾಟ್ ನೀಡುವುದಾಗಿ ಭರವಸೆ ನೀಡಿದ್ದು, ಭವಿಷ್ಯದಲ್ಲಿ ಅಲೀಮ್ ದಾರ್ ಅವರು ಅಂಪೈರ್ ಮಾಡುವ ಪಂದ್ಯದಲ್ಲಿ ನೀವು ಬ್ಯಾಟಿಂಗ್ ಮಾಡುವಂತಾಗಲಿ ಎಂದು ಹಾರೈಸಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement