ನವದೆಹಲಿ: ಬಹು ನಿರೀಕ್ಷಿತ ಸರಣಿಗೆ ಇನ್ನೂ ಒಂದು ವರ್ಷ ಕಾಲಾವಕಾಶವಿರುವಂತೆಯೇ ಸರಣಿಯ ಬಿಸಿ ಏರುತ್ತಿದ್ದು, ಇದೀಗ ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪಾಕ್ ಕ್ರಿಕೆಟ್ ಅಭಿಮಾನಿಗಳ ಕಾಲೆಳೆದಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಐಸಿಸಿ ಚಾಲನೆ ನೀಡಿದ್ದು, ಈಗಾಗಲೇ ವೇಳಾ ಪಟ್ಟಿ ಕೂಡ ಬಿಡುಗಡೆಯಾಗಿದೆ. ವೇಳಾಪಟ್ಟಿ ಬಿಡುಗಡೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಕಾಲೆಳೆದಿದ್ದು, ಪಾಕಿಸ್ತಾನ ತಂಡ ಭಾರತದ ವಿರುದ್ಧ ಮತ್ತೆ ಸೋತರೆ ಟಿವಿ ಸೆಟ್ ಗಳನ್ನು ಮುರಿಯದಂತೆ ಮನವಿ ಮಾಡುವ ಮೂಲಕ ಪರೋಕ್ಷವಾಗಿ ಮತ್ತೆ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋಲುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಸೆಹ್ವಾಗ್ ಅವರ ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೆಹ್ವಾಗ್ ಟ್ವೀಟ್ ಸಾವಿರಾರು ಮಂದಿ ಬೆಂಬಲ ಸೂಚಿಸಿದ್ದಾರೆ. "ವಾವ್...ಭಾರತ-ಪಾಕ್ ಪಂದ್ಯಕ್ಕೆ ಕೇವಲ 1 ಒಂದು ವರ್ಷ ಬಾಕಿ... ಪಾಕಿಸ್ತಾನದ ಸಹೋದರರಿಗೆ ನನ್ನ ಮನವಿ.. ದಯಮಾಡಿ ಟಿವಿ ಸೆಟ್ ಗಳನ್ನು ಒಡೆದು ಹಾಕಬೇಡಿ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.