ದುಬೈ: ನೂತನ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದ್ದು, ಆಗ್ರ ಸ್ಥಾನದಲ್ಲಿ ಆಸ್ಟ್ರೇಲಿಯಾ ಮತ್ತು ಮೂರನೇ ಸ್ಥಾನದಲ್ಲಿ ಭಾರತ ತಂಡ ಮುಂದುವರೆದಿದೆ.
ವೆಸ್ಟ್ ಇಂಡೀಸ್ ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ತ್ರಿಕೋನ ಏಕದಿನ ಸರಣಿ ಬಳಿಕ ಐಸಿಸಿ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗೊಡೆಗೊಳಿಸಿದ್ದು, ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯನ್ನು ವಶಪಡಿಸಿಕೊಂಡ ಆಸ್ಚ್ರೇಲಿಯಾ 123 ಅಂಕಗಳೊಂದಿಗೆ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.113 ಅಂಕಗಳನ್ನು ಗಳಿಸಿರುವ ನ್ಯೂಜಿಲೆಂಡ್ ತಂಡ ಎರಡನೇ ಸ್ಥಾನದಲ್ಲಿದ್ದರೆ 110 ಅಂಕಗಳನ್ನು ಗಳಿಸಿರುವ ಭಾರತ ಮೂರನೇ ಸ್ಥಾನದಲ್ಲಿದೆ.
ಉಳಿದಂತೆ ತ್ರಿಕೋನ ಏಕದಿನ ಸರಣಿಯಲ್ಲಿ ಫೈನಲ್ ತಲುಪಲ ವಿಫಲವಾದ ದಕ್ಷಿಣ ಆಫ್ರಿಕಾ ತಂಡ (110 ಅಂಕ) ನಾಲ್ಕನೇ ಸ್ಥಾನಕ್ಕಿಳಿದಿದೆ. ಈ ಟೂರ್ನಿಯಲ್ಲಿ ಆಫ್ರಿಕಾ ತಂಡ ಪೈನಲ್ ತಲುಪಿದ್ದರೆ ಭಾರತವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳುವ ಅವಕಾಶವಿತ್ತು. ಆದರೆ ಈ ಅವಕಾಶವನ್ನು ಆಫ್ರಿಕಾ ತಂಡ ಕೈಚೆಲ್ಲಿದೆ. ಉಳಿದಂತೆ ಇಂಗ್ಲೆಂಡ್ (104 ಅಂಕ), ಶ್ರೀಲಂಕಾ (104 ಅಂಕ), ಬಾಂಗ್ಲಾದೇಶ (98 ಅಂಕ), ವೆಸ್ಟ್ ಇಂಡೀಸ್ (94 ಅಂಕ), ಪಾಕಿಸ್ತಾನ (87 ಅಂಕ), ಆಫ್ಘಾನಿಸ್ತಾನ (51 ಅಂಕ), ಜಿಂಬಾಂಬ್ವೆ (46 ಅಂಕ) ಮತ್ತು ಐರ್ಲೆಂಡ್ (41 ಅಂಕ) ನಂತರದ ಸ್ಥಾನಗಳಲ್ಲಿವೆ.