ಲಾಹೋರ್: ಟೀಂ ಇಂಡಿಯಾ 2011ರ ವಿಶ್ವಕಪ್ ಗೆದ್ದರೆ ಸಾರ್ವಜನಿಕವಾಗಿ ಬೆತ್ತಲಾಗುತ್ತೇನೆ ಎಂದು ಹೇಳಿದ್ದ ನಟಿ ಪೂನಂ ಪಾಂಡೆ ರೀತಿಯಲ್ಲೆ ಪಾಕಿಸ್ತಾನದ ನಟಿಯೊಬ್ಬಳು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ವಿರುದ್ದದ ಮೊದಲ ಪಂದ್ಯವನ್ನು ಶಾಹಿದ್ ಆಫ್ರಿದಿ ಪಡೆ ಗೆದ್ದರೆ ನರ್ತಿಸುತ್ತಾ ಬೆತ್ತಲಾಗುವುದಾಗಿ ಪಾಕ್ ರೂಪದರ್ಶಿ ಹಾಗೂ ನಟಿ ಕ್ವಂಡೀಲ್ ಬಲೋಚ್ ಹೇಳಿದ್ದಾಳೆ.
ಈಡನ್ ಗಾರ್ಡನ್ ನಲ್ಲಿ ಶನಿವಾರ ನಡೆಯಲಿರುವ ಟಿ20 ವಿಶ್ವಕಪ್ ಪ೦ದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಗೆದ್ದರೆ, ಸ್ಟ್ರಿಪ್ ಡ್ಯಾನ್ಸ್ ಮಾಡುವುದಾಗಿ ಕ್ವಂಡೀಲ್ ಬಲೋಚ್ ತನ್ನ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾಳೆ.
ಶಾಹಿದ್ ಅಫ್ರಿದಿ, ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಮೆಂಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೆ ಸಾಕಷ್ಟು ಪ್ರಖ್ಯಾತಿ ಗಳಿಸಿಕೊ೦ಡಿರುವ ಬಲೋಚ್ ತಮ್ಮ ಫೇಸ್ ಬುಕ್ ಪುಟದಲ್ಲಿ, "ಪಾಕಿಸ್ತಾನ ತ೦ಡ ಭಾರತವನ್ನು ಮಣಿಸಿದರೆ ನಾನು ನಿಮಗೆಲ್ಲರಿಗಾಗಿ ಸ್ಟ್ರಿಪ್ ಡ್ಯಾನ್ಸ್ ಮಾಡಲಿದ್ದೇನೆ ಮತ್ತು ಇದನ್ನು ಅಫ್ರಿದಿಗೆ ಅಪಿ೯ಸುತ್ತೇನೆ' ಎ೦ದು ಬರೆದುಕೊ೦ಡಿದ್ದಾಳೆ.