ಭಾರತ ತಂಡ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಟೀಂ ಇಂಡಿಯಾ (ಸಂಗ್ರಹ ಚಿತ್ರ) 
ಕ್ರಿಕೆಟ್

ಕಿವೀಸ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಕಾರಣವಾದ 5 ಅಂಶಗಳು

ಆತಿಥೇಯ ತಂಡ ಮತ್ತು ಟೂರ್ನಿ ಗೆಲ್ಲುವ ಫೇವರಿಟ್ ತಂಡ ಎಂಬ ಹೆಗ್ಗಳಿಕೆಯ ನಡುವೆಯೇ ತನ್ನ ಮೊದಲ ಪಂದ್ಯದಲ್ಲಿ ಸ್ವಯಂಕೃತ ಅಪರಾಧದಿಂದಾಗಿಯೇ ಸುಲಭವಾಗಿ ಗೆಲ್ಲಬಹುದಾಗಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ ಕೈ ಚೆಲ್ಲಿದೆ.

ನಾಗ್ಪುರ: ಆತಿಥೇಯ ತಂಡ ಮತ್ತು ಟೂರ್ನಿ ಗೆಲ್ಲುವ ಫೇವರಿಟ್ ತಂಡ ಎಂಬ ಹೆಗ್ಗಳಿಕೆಯ ನಡುವೆಯೇ ತನ್ನ ಮೊದಲ ಪಂದ್ಯದಲ್ಲಿ ಸ್ವಯಂಕೃತ ಅಪರಾಧದಿಂದಾಗಿಯೇ ಸುಲಭವಾಗಿ  ಗೆಲ್ಲಬಹುದಾಗಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ ಕೈ ಚೆಲ್ಲಿದೆ.

ಬಲಾಢ್ಯ ಬ್ಯಾಟಿಂಗ್ ಪಡೆ ಇದ್ದರೂ ನ್ಯೂಜಿಲೆಂಡ್ ನೀಡಿದ ಅಲ್ಪ ಮೊತ್ತದ ಸಾವಾಲನ್ನು ಮುಟ್ಟಲಾಗದ ಟೀಂ ಇಂಡಿಯಾದ ಸೋಲಿಗೆ ಕಾರಣವಾದ ಐದು ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ನಿರ್ಣಾಯಕ ಪಾತ್ರವಹಿಸಿದ ಟಾಸ್
ಸಾಮಾನ್ಯವಾಗಿ ಎಲ್ಲ ಮಾದರಿ ಕ್ರಿಕೆಟ್ ನಲ್ಲೂ ಟಾಸ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಟಾಸ್ ನಿರ್ಣಾಯಕ ಪಾತ್ರ ನಿರ್ವಹಿಸಿತ್ತು.  ನಾಗ್ಪುರದ ಜುಮ್ತಾ ಪಿಚ್ ನಲ್ಲಿ ಟಾಸ್ ಗೆದ್ದ ಕಿವೀಸ್ ಪಡೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಆರಂಭಿಕ ಹಂತದಲ್ಲೇ ಗೆದ್ದಿತ್ತು ಎಂದು ಹೇಳಬಹುದು. ಏಕೆಂದರೆ ಕ್ಷಣ ಕ್ಷಣಕ್ಕೂ ತಿರುವು  ಪಡೆಯುವ ನಾಗ್ಪುರದ ಪಿಚ್ ನಲ್ಲಿ ಎರಡನೇ ಬಾರಿ ಬ್ಯಾಟಿಂಗ್ ಮಾಡುವುದು ಸವಾಲಿನ ಕೆಲಸವೇ ಸರಿ.

ಭಾರತಕ್ಕೆ ತಿರುಗು ಬಾಣವಾದ ನಾಗ್ಪುರ ಪಿಚ್

ತವರು ನೆಲದ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಟೀಂ ಇಂಡಿಯಾಗೆ ನಾಗ್ಪುರ ಪಿಚ್ ಕೂಡ ಸವಾಲೊಡ್ಡಿತ್ತು. ಸಾಕಷ್ಟು ಅಭ್ಯಾಸದ ನಡುವೆಯೂ ಪಿಚ್ ಗುಣಗಳನ್ನು ಅರಿಯುವಲ್ಲಿ ಟೀಂ  ಇಂಡಿಯಾದ ಬ್ಯಾಟ್ಸಮನ್ ಗಳು ವಿಫಲರಾದರು. ತನ್ನ ಬಲಿಷ್ಠ ಸ್ಪಿನ್ ದಾಳಿ ಮೂಲಕ ನ್ಯೂಜಿಲೆಂಡ್ ಬ್ಯಾಟಿಂಗ್ ಅನ್ನು ಕಟ್ಟಿ ಹಾಕುವ ಧೋನಿ ತಂತ್ರಗಾರಿಕೆ ಅವರಿಗೇ ತಿರುಗುಬಾಣವಾಯಿತು.  ಧೋನಿ ಪ್ರಯೋಗಿಸಿದ ಅದೇ ತಂತ್ರವನ್ನು ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಭಾರತದ ವಿರುದ್ಧ ಪ್ರಯೋಗಿಸುವ ಮೂಲಕ ಯಶಸ್ಸು ಗಳಿಸಿದರು. ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದ್ದ ಪಿಚ್  ನಲ್ಲಿ ಮೂವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸಿ ಭಾರತಕ್ಕೆ ಸಾವಾಲೆಸೆದರು.

ನಿರೀಕ್ಷೆ ಮೀರಿ ಮಾರಕವಾದ ಕಿವೀಸ್ ಪಡೆಯ ಸ್ಪಿನ್ನರ್ ಗಳು
ಇನ್ನು ನಾಗ್ಪುರದಂತಹ ಸವಾಲಿನ ಪಿಚ್ ನಲ್ಲಿ ಮೂವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರ ತಂತ್ರಗಾರಿಕೆ ನಿಜಕ್ಕೂ ಅಭೂತಪೂರ್ವ  ಫಲ ನೀಡಿತ್ತು. ಬಲಾಢ್ಯ ಬ್ಯಾಟಿಂಗ್ ಲೈನ್ ಆಪ್ ಹೊಂದಿರುವ ಭಾರತ ತಂಡಕ್ಕೆ ಕಿವೀಸ್ ಪಡೆಯ ಸ್ಪಿನ್ನರ್ ಗಳು ನಿರೀಕ್ಷೆಗೂ ಮೀರಿ ಮಾರಕವಾಗಿ ಪರಿಣಮಿಸಿದರು. ಪ್ರಮುಖವಾಗಿ ಸ್ಯಾಂಥರ್  ಅವರ ಅದ್ಭುತ ಬೌಲಿಂಗ್ ಭಾರತೀಯ ಬ್ಯಾಟ್ಸಮನ್ ಗಳನ್ನು ಕಂಗೆಡಿಸಿತ್ತು. ಹೀಗಾಗಿ ಅಲ್ಪ ಮೊತ್ತದ ಗುರಿಯನ್ನು ತಲುಪಲಾಗದೇ ಕೇವಲ 79 ರನ್ ಗಳಿಗೇ ಭಾರತ ಕುಸಿಯಿತು.

ಭಾರತದ ಬ್ಯಾಟಿಂಗ್ ವೈಫಲ್ಯ
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನು ಭಾರತ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆ ಇಡೀ ವಿಶ್ವಕ್ಕೆ ಸವಾಲೆಸೆದಿತ್ತು. ಎಂತಹ ಬೃಹತ್ ಮೊತ್ತವೇ ಆದರೂ ಛಿದ್ರಮಾಡಬಲ್ಲ ಸಾಮರ್ಥ್ಯವನ್ನು ಭಾರತ  ತಂಡ ಹೊಂದಿದೆ ಎಂಬ ಅಭಿಪ್ರಾಯವ್ಯಕ್ತವಾಗಿತ್ತು. ಆದರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಕಿವೀಸ್ ಪಡೆ ನೀಡಿದ್ದ 127 ರನ್ ಗಳ ಅಲ್ಪ ಮೊತ್ತವನ್ನೇ ದಾಟಲಾಗದೇ ಟೀಂ ಇಂಡಿಯಾ  ಪರದಾಡಿದೆಯ. ಆ ಮೂಲಕ ಟೀಂ ಇಂಡಿಯಾದ ಬ್ಯಾಟಿಂಗ್ ಅನ್ನು ಮತ್ತೆ ವಿಮರ್ಶಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರಮುಖವಾಗಿ ಕಿವೀಸ್ ವಿರುದ್ಧ ಪಂದ್ಯದಲ್ಲಿ ಬರೊಬ್ಬರಿ 8 ಆಟಗಾರರು  ಎರಡಂಕಿ ಮೊತ್ತವನ್ನೂ ಕೂಡ ದಾಟದೇ ಇರುವುದು ಅಚ್ಚರಿಗೆ ಕಾರವಾಗಿದೆ. ಈ ಪೈಕಿ ಮೂರು ಮಂದಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಟೀಂ ಇಂಡಿಯಾದ ಈ ಸೋಲಿಗೆ ಪ್ರಮುಖವಾಗಿ ಬ್ಯಾಟ್ಸಮನ್  ಗಳೇ ಕಾರಣ ಎಂದರೆ ತಪ್ಪಲ್ಲ.

ಸರಿಯಾಗಿ ಸದ್ಭಳಕೆಯಾಗದ ಆರ್.ಅಶ್ವಿನ್
ಆರ್.ಅಶ್ವಿನ್ ಟೀಂ ಇಂಡಿಯಾದ ಪ್ರಮುಖ ಸ್ಪಿನ್ ಅಸ್ತ್ರ. ಪಂದ್ಯದ ಆರಂಭಿಕ ಓವರ್ ಅನ್ನು ಅಶ್ವಿನ್ ಗೆ ನೀಡುವ ಮೂಲಕ ಧೋನಿ ಎಲ್ಲರ ಅಚ್ಚರಿಗೆ ಕಾರಣವಾದರು. ಆದರೆ ಮೊದಲ  ಎಸೆತದಲ್ಲಿಯೇ ಅಶ್ವಿನ್ ಎಸೆತವನ್ನು ಕಿವೀಸ್ ಪಡೆಯ ಬ್ಯಾಟ್ಸಮನ್ ಸಿಕ್ಸರ್ ಗೆ ಎತ್ತುವ ಮೂಲಕ ಧೋನಿ ತಂತ್ರಗಾರಿಕೆಯನ್ನು ವಿಫಲ ಮಾಡುವ ಮುನ್ಸೂಚನೆ ನೀಡಿದರಾದರೂ, ನಂತರದ  ಎಸೆತದಲ್ಲಿಯೇ ಅಶ್ವಿನ್ ಅವರ ವಿಕೆಟ್ ಪಡೆಯುವ ಮೂಲಕ ಧೋನಿ ನಿರ್ಧಾರವನ್ನು ಸಮರ್ಥಿಸಿಕೊಂಡರು. ಆ ಬಳಿಕ ಅಶ್ವಿನ್ ಮತ್ತು ನೆಹ್ರಾ ಜೋಡಿ ಕಿವೀಸ್ ಪಡೆಯ ಮೇಲೆ ಒತ್ತಡ ಹೇರುತ್ತಾ  ಸಾಗಿತಾದರೂ, ಈ ಹಂತದಲ್ಲಿ ಧೋನಿ ಮಾಡಿದ ಒಂದು ಯಡವಟ್ಟು ಟೀಂ ಇಂಡಿಯಾದ ಸೋಲಿಗೆ ಕಾರಣವಾಯಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟೀಂ ಇಂಡಿಯಾದ ಪ್ರಮುಖ ಅಸ್ತ್ರವಾಗಿದ್ದ ಅಶ್ವಿನ್ ಅವರ ಕೊನೆಯ ಓವರ್ ಅನ್ನು ಇನ್ನಿಂಗ್ಸ್ ಅಂತಿಮ ಹಂತದಲ್ಲಿ ಬಳಸಿಕೊಂಡಿದ್ದರೆ ಬಹುಶಃ ಇನ್ನೂ ಕಡಿಮೆ ಮೊತ್ತಕ್ಕೆ ಕಿವೀಸ್ ಪಡೆಯನ್ನು ಕಟ್ಟಿ  ಹಾಕಬಹುದಿತ್ತು. ಆದರೆ ಧೋನಿ ಪಂದ್ಯದ 10 ನೇ ಓವರ್ ನಲ್ಲಿಯೇ ಅಶ್ವಿನ್ ಅವರ ಕೊನೆಯ  ಓವರ್ ಅನ್ನು ಹಾಕಲು ಅವಕಾಶ ಮಾಡಿಕೊಟ್ಟರು. ಆ ಮೂಲಕ ಧೋನಿ ಅಶ್ವಿನ್ ಅವರನ್ನು  ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಒಟ್ಟಾರೆ ಕಿವೀಸ್ ವಿರುದ್ಧದ ಮೊದಲ ಪಂದ್ಯ ಭಾರತ ತಂಡಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಮುಂದಿನ ಪಂದ್ಯಗಳಲ್ಲಿ ಭಾರತ ತನ್ನ ಈ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡರೆ ಖಂಡಿತಾ  ಟಿ20 ವಿಶ್ವಕಪ್ ನಲ್ಲಿ ಅಂತಿಮ ಘಟ್ಟ ತಲುಪುವುದರಲ್ಲಿ ಎರಡು ಮಾತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ: ವಿಂಡೀಸ್ ವಿರುದ್ಧ ಗೆಲುವು; T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್