ಚೆನ್ನೈ: ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ವೆಸ್ಟ್ ಇಂಡೀಸ್-ಪಾಕಿಸ್ತಾನ ನಡುವೆ ಚೆನ್ನೈನಲ್ಲಿ ನಡೆದ ಪಂದ್ಯದ ವೇಳೆ ಬೌನ್ಸರ್ ಏಟು ತಿಂದಿದ್ದ ಪಾಕ್ ಆಟಗಾರ್ತಿ ಜವೇರಿಯಾ ಖಾನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪಾಕಿಸ್ತಾನ ತಂಡದ 27 ವರ್ಷದ ಖಾನ್ ಪಂದ್ಯದಲ್ಲಿ ವಿಂಡೀಸ್ ನ ಶಮಿಲಿಯಾ ಬೌನ್ಸರ್ ಎಸೆತಕ್ಕೆ ಉತ್ತರಿಸುವ ಪ್ರಯತ್ನದಲ್ಲಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡರು. ನಂತರ ಚೆಂಡು ಹೆಲ್ಮೆಟ್ ಗೆ ಬಡಿದಿದೆ. ಕುಸಿದು ಬಿದ್ದ ಅವರನ್ನು ತಕ್ಷಣ ಸ್ಟ್ರೆಚರ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.