ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಪಾಕಿಸ್ತಾನ ಹಾಗೂ ಭಾರತ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲು ದೇಶಾದ್ಯಂತ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ.
ಧೋನಿ ಪಡೆ ಪಾಕ್ ವಿರುದ್ಧ ಜಯ ಸಾಧಿಸಲೆಂದು ಮುಸ್ಲಿಂ ಅಭಿಮಾನಿಗಳು ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರೆ. ಇತ್ತ ಹಿಂದೂಗಳು ಮಂದಿರಗಳಲ್ಲಿ ಹೋಮ ಹವನ ಮಾಡುತ್ತಿದ್ದಾರೆ. ಇನ್ನು ಗಂಗಾ ನದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಟೀಂ ಇಂಡಿಯಾಗೆ ಬಲ ತುಂಬುತ್ತಿದ್ದಾರೆ.
ವಿಜಯಪುರ ನಗರದ ಜಲನಗರದಲ್ಲಿರುವ ಜೈ ಸಂತೋಷಿ ಮಾತಾ ಮಂದಿರದಲ್ಲಿ ವಿಶೇಷ ಪುಜೆ ಸಲ್ಲಿಸಲಾಯಿತು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತದ ಪರ ಘೋಷಣೆ ಹಾಕಿದ ಜೈ ಸಂತೋಷಿ ಮಾತಾ ಯುವಕ ಮಂಡಳಿ ಕಾರ್ಯಕರ್ತರು, ಭಾರತ ಗೆಲ್ಲಲಿ ಎಂದು ಪ್ರಾರ್ಥಿಸಿದರು.