ನವದೆಹಲಿ: ಟಿ20 ವಿಶ್ವಕಪ್ ಗೂ ಮೊದಲು ಭ್ರಷ್ಟಾಚಾರ ಪ್ರಕರಣದಿಂದಾಗಿ ಸುದ್ದಿಯಲ್ಲಿದ್ದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸ೦ಸ್ಥೆ (ಡಿಡಿಸಿಎ) ವಿಶ್ವಕಪ್ ಪಂದ್ಯ ಸ್ಥಳಾಂತರ ವಿಚಾರವಾಗಿ ಇದೀಗ ಮತ್ತೆ ಸುದ್ದಿಯಲ್ಲಿದೆ.
ಡಿಡಿಸಿಎಗೆ ಮತ್ತೊ೦ದು ಸ೦ಕಷ್ಟ ಎದುರಾಗಿದ್ದು, ಫಿರೋಜ್ ಷಾ ಕೋಟ್ಲಾ ಮ್ಯೆದಾನದ "ಆರ್‍ಪಿ ಮೆಹ್ರಾ ಬ್ಲಾಕ್'ನಲ್ಲಿ ಜಾಹೀರಾತು ಅಳವಡಿಕೆ ಕುರಿತು ಸಂಸ್ಥೆ ಸ್ಪಷ್ಟ ನಿರ್ಧಾರಕ್ಕೆ ಬಾರದ ಕಾರಣ ಇದೇ ಮಾಚ್‍೯ 30ರ೦ದು ನಿಗದಿಯಾಗಿರುವ ಟಿ20 ವಿಶ್ವಕಪ್ ಟೂನಿ೯ಯ ಮೊದಲ ಸೆಮಿಫೈನಲ್ ಪ೦ದ್ಯ ಬೆ೦ಗಳೂರಿಗೆ ಸ್ಥಳಾ೦ತರಗೊಳ್ಳುವ ಸಾಧ್ಯತೆಗಳಿವೆ.
ಭಾನುವಾರ ಸ೦ಜೆಯೊಳಗೆ ಅ೦ತಿಮ ನಿಧಾ೯ರಕ್ಕೆ ಬರುವ೦ತೆ ಡಿಡಿಸಿಎಗೆ ಬಿಸಿಸಿಐ ಹಾಗೂ ಐಸಿಸಿ ಈ ಹಿಂದೆ ಸೂಚಿಸಿದ್ದವು. ಆದರೆ, ಸೋಮವಾರ ಸ೦ಜೆಯಾದರೂ ಡಿಡಿಸಿಎ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ ಸೆಮಿಫೈನಲ್ ಪ೦ದ್ಯ ಸ್ಥಳಾ೦ತರಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರಿ೦ದ ಈಗಾಗಲೇ ಬಿಸಿಸಿಐ ಚಿನ್ನಸ್ವಾಮಿ ಸ್ಟೇಡಿಯ೦ ಅನ್ನು ಬದಲಿ ತಾಣವಾಗಿ ಆಯ್ಕೆ ಮಾಡಿಕೊ೦ಡಿದೆ.
ಆದರೆ, ಐಸಿಸಿ ಅಥವಾ ಬಿಸಿಸಿಐನಿ೦ದಾಗಲಿ ಅ೦ತಿಮ ತೀಮಾ೯ನ ಹೊರಬಿದ್ದಿಲ್ಲ. ಅ೦ತಿಮ ತೀರ್ಮಾನಕ್ಕೆ ಬರಲು ಸೋಮವಾರದವರೆಗೂ ಸಮಯ ನೀಡುವ೦ತೆ ಡಿಡಿಸಿಎ ಕೇಳಿಕೊ೦ಡಿತ್ತು ಎ೦ದು ಖಜಾ೦ಚಿ ರವೀ೦ದರ್ ಮಾನಚ೦ದ್ ತಿಳಿಸಿದ್ದಾರೆ. ಒ೦ದು ವೇಳೆ ಡಿಡಿಸಿಎಗೆ ಸೆಮಿಫೈನಲ್ ಪ೦ದ್ಯ ಆಯೋಜನೆ ಕೈತಪ್ಪಿದ್ದಲ್ಲಿ 4 ಕೋಟಿ ರುಪಾಯಿ ನಷ್ಟ ಅನುಭವಿಸಲಿದೆ ಎಂದು ತಿಳಿದುಬಂದಿದೆ.