ಕ್ರಿಕೆಟ್

ವಿಶ್ವಕಪ್ ಟಿ20: ಸೆಮಿ ಫೈನಲ್ ಗೆಲ್ಲಲು ಇಂಗ್ಲೆಂಡ್ ಗೆ 154ರನ್ ಗಳ ಟಾರ್ಗೆಟ್

ವಿಶ್ವಕಪ್ ಟಿ20 ಪಂದ್ಯಾವಳಿಯ ಮೊದಲ ಸೆಮಿ ಫೈನಲ್ ಪಂದ್ಯ ದೆಹಲಿಯ ಐತಿಹಾಸಿಕ ಫಿರೋಜಾ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿದ್ದು,...

ನವದೆಹಲಿ: ವಿಶ್ವಕಪ್ ಟಿ20 ಪಂದ್ಯಾವಳಿಯ ಮೊದಲ ಸೆಮಿ ಫೈನಲ್ ಪಂದ್ಯ ದೆಹಲಿಯ ಐತಿಹಾಸಿಕ ಫಿರೋಜಾ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿ ಲ್ಯಾಂಡ್‌, ಸೆಮಿ ಫೈನಲ್ ಗೆಲ್ಲಲು ಇಂಗ್ಲೆಂಡ್ ಗೆ 154 ರನ್ ಗಳ ಟಾರ್ಗೆಟ್ ನೀಡಿದೆ.
ಲೀಗ್‌ ಹಂತದ ಎಲ್ಲ ಪಂದ್ಯಗಳನ್ನು ಗೆದ್ದು ಚೊಚ್ಚಲ ವಿಶ್ವಕಪ್ ಟಿ20 ಗೆಲ್ಲುವ ವಿಶ್ವಾಸದಲ್ಲಿದರುವ ನ್ಯೂಜಿ ಲ್ಯಾಂಡ್‌, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153ರನ್ ಕಲೆ ಹಾಕಿದೆ.
ನ್ಯೂಜಿ ಲ್ಯಾಂಡ್‌ ಪರ ಕಾಲಿನ್ ಮುನ್ರೋ 46, ಕೇನ್ ವಿಲಿಯಮ್ಸನ್ 32, ಆಂಡರ್ಸನ್ 28, ಮಾರ್ಟಿನ್ ಗಫ್ಟಿಲ್ 15, ರೊಂಚಿ 3 ಹಾಗೂ ಗ್ರಾಂಟ್ ಎಲಿಯಟ್ ಔಟಾಗದೆ 4 ರನ್ ಗಳಿಸಿದ್ದಾರೆ.
ಇನ್ನು ಇಂಗ್ಲೆಂಡ್ ಪರ ಉತ್ತಮ ಬೌಲಿಂಗ್ ಮಾಡಿದ ಬೆನ್ ಸ್ಟೋಕ್ಸ್ 3 ವಿಕೆಟ್ ಪಡೆದಿದ್ದಾರೆ.
2010ರ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಹೋಲಿಸಿದರೆ, ನ್ಯೂಜಿಲೆಂಡ್ ಫೇವರಿಟ್ ತಂಡವಾಗಿ ಗೋಚರಿಸಿದೆ. ಈವರೆಗೂ 13 ಟಿ20 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ 4ರಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್ 8ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದುಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ