ವಿರಾಟ್ ಕೊಹ್ಲಿ- ಜಹೀರ್ ಖಾನ್ 
ಕ್ರಿಕೆಟ್

ಪವರ್ ಫುಲ್ ನಾಕೌಟ್ ಸಮರಕ್ಕೆ ಆರ್ ಸಿ ಬಿ- ಡೆಲ್ಲಿ ಡೇರ್ ಡೆವಿಲ್ಸ್‌ ಸಜ್ಜು

ಐಪಿಎಲ್‌ನ 9ನೇ ಆವೃತ್ತಿ ಅಂತಿಮ ಹಂತ ತಲುಪಿದ್ದು, ಲೀಗ್‌ಹಂತದ ಅಂತಿಮ ಹೋರಾಟದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಡೇರ್ ಡೆವಿಲ್ಸ್‌ ...

ರಾಯ್ಪುರ್ : ಐಪಿಎಲ್‌ನ 9ನೇ ಆವೃತ್ತಿ ಅಂತಿಮ ಹಂತ ತಲುಪಿದ್ದು, ಲೀಗ್‌ಹಂತದ ಅಂತಿಮ ಹೋರಾಟದಲ್ಲಿ  ರಾಯಲ್‌ ಚಾಲೆಂಜರ್ಸ್  ಬೆಂಗಳೂರು ತಂಡವು ಡೆಲ್ಲಿ ಡೇರ್ ಡೆವಿಲ್ಸ್‌ ತಂಡವನ್ನು ಎದುರಿಸಲಿದೆ. ಉಭಯ ತಂಡಗಳಿಗಿದು ನಾಕೌಟ್‌ ಪಂದ್ಯವಾಗಿದ್ದು, ಇಲ್ಲಿ ಗೆದ್ದ ತಂಡ ಪ್ಲೇ ಆಫ್ ಗೆ ಅರ್ಹತೆ ಪಡೆಯಲಿದೆ. 
ಶುಕ್ರವಾರದ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ ಗೆಲುವು ಸಾಧಿಸಿದ್ದ ಡೆಲ್ಲಿ ತಂಡ ಪ್ಲೇ ಆಫ್ ಆಸೆಯನ್ನು ಜೀವಂತವಿಟ್ಟುಕೊಂಡಿತ್ತು. ಭಾನುವಾರ ಡೆಲ್ಲಿ, ಆರ್ ಸಿ ಬಿ ತಂಡವನ್ನು ಸೋಲಿಸಿದರೆ ಒಟ್ಟು 16 ಅಂಕದೊಂದಿಗೆ ಪ್ಲೇ ಆಫ್ಗೆ ತೇರ್ಗಡೆಯಾಗಬಹುದು. ಆದರೆ ಉಭಯ ತಂಡಗಳ ಸಾಧನೆಯನ್ನು ಅವಲೋಕಿಸಿದರೆ ಬೆಂಗಳೂರೇ ಗೆಲ್ಲುವ ಫೇವರಿಟ್‌ ತಂಡವಾಗಿದೆ. 
ಆರ್ ಸಿಬಿ ಈವರೆಗೆ  ಆಡಿದ 13 ಐಪಿಎಲ್  ಪಂದ್ಯಗಳಿಂದ ಏಳರಲ್ಲಿ ಜಯ ಸಾಧಿಸಿ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ ಅಷ್ಟೇ ಅಂಕ ಹೊಂದಿರುವ ಡೆಲ್ಲಿ ಆರನೇ ಸ್ಥಾನದಲ್ಲಿದೆ. ಎರಡು ಬಾರಿಯ ಚಾಂಪಿಯನ್‌ಕೋಲ್ಕತಾ ಮತ್ತು ಮುಂಬೈ ಕೂಡ 14 ಅಂಕ ಹೊಂದಿದ್ದು 4 ಮತ್ತು 5ನೇ ಸ್ಥಾನದಲ್ಲಿದೆ. ಶನಿವಾರ ನಡೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮುಂಬೈ ಸೋತಿರುವ ಕಾರಣ, ಬೆಂಗಳೂರು ತಂಡಕ್ಕೆ ಇದು ವರದಾನವಾಗಿ ಆಗಿ ಪರಿಣಮಿಸಿದೆ
ಕೊಹ್ಲಿಯ ಮೇಲೆ ಹೆಚ್ಚಾಗಿದೆ ಭರವಸೆ
ಹ್ಯಾಟ್ರಿಕ್‌ಗೆಲುವು ಸಾಧಿಸಿ ಹೊರಬೀಳುವ ಸ್ಥಿತಿಯಿಂದ ಮೇಲಕ್ಕೇರಿದ ಬೆಂಗಳೂರು ತಂಡ ಸದ್ಯ ಭರ್ಜರಿ ಫಾರ್ಮ್ ನಲ್ಲಿದೆ. ಆರ್ ಸಿ ಬಿ  ನಾಯಕ ವಿರಾಟ್‌ಕೊಹ್ಲಿ ಸಹಿತ ಗೇಲ್‌, ಎಬಿಡಿ ವಿಲಿಯರ್ ಅಮೋಘವಾಗಿ ಆಡುತ್ತಿದ್ದಾರೆ. ಒಂದು ಕೂಟದಲ್ಲಿ ನಾಲ್ಕು ಶತಕ ಸಿಡಿಸಿದ ಕೊಹ್ಲಿ ಈಗ ಉತ್ತಮ ಫಾರ್ಮ್ ನಲ್ಲಿರುವುದು ಆರ್ ಸಿ ಬಿ ಪ್ಲಸ್ ಪಾಯಿಂಟ್. ಇಲ್ಲಿಯವರೆಗೆ ಆಡಿದ 13 ಪಂದ್ಯಗಳಿಂದ ಕೊಹ್ಲಿ  865 ರನ್‌ಪೇರಿಸಿದ್ದು ಸಾವಿರ ರನ್‌ಪೂರ್ತಿಗೊಳಿಸುವ ಉತ್ಸಾಹದಲ್ಲಿದ್ದಾರೆ.
ಪ್ಲೇ ಆಫ್ ಅರ್ಹತೆ ಪಡೆಯಲು ಡೆಲ್ಲಿ ಸನ್ನದ್ಧ
ಸತತ ಎರಡು ಸೋಲಿನ ಬಳಿಕ ಶುಕ್ರವಾರ ಹೈದರಾಬಾದ್‌ವಿರುದ್ಧ ಅಂತಿಮ ಎಸೆತದಲ್ಲಿ ಜಯ ಸಾಧಿಸಿದ ಡೆಲ್ಲಿ ತಂಡ ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶ ಪಡೆದಿತ್ತು  ಜಹೀರ್‌ಖಾನ್‌ನೇತೃತ್ವದ ಡೆಲ್ಲಿ ಅಸ್ಥಿರ ನಿರ್ವಹಣೆ ನೀಡುತ್ತಿದ್ದರೂ ನಿರ್ಣಾಯಕ ಹಂತದಲ್ಲಿ ಜಯ ಸಾಧಿಸಿ ಪ್ಲೇ ಆಫ್ ಸಾಧ್ಯತೆಯನ್ನು ತೆರೆದಿಟ್ಟಿದೆ. ಕ್ವಿಂಟನ್‌ಡಿ ಕಾಕ್‌, ಕರುಣ್‌ನಾಯರ್‌ಮತ್ತು ಸಂಜು ಸ್ಯಾಮ್ಸನ್‌ಅವರನ್ನು ತಂಡ ಬ್ಯಾಟಿಂಗ್‌ನಲ್ಲಿ  ಮಿಂಚುತ್ತಿದ್ದು ಡೆಲ್ಲಿ ಪಾಲಿಗೆ ಪ್ಲಸ್  ಪಾಯಿಂಟ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT