ಲಂಡನ್: ಸೆಕ್ಸಿ ಮಾತುಗಳಿಂದ ಸದ್ಯ ವಿವಾದಕ್ಕೀಡಾಗಿರುವ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ತಾವು ಸಂದರ್ಶನದ ವೇಳೆ ಮಹಿಳಾ ವರದಿಗಾರ್ತಿಯರ ಜತೆ ತಾನಾಡುವ ಸೆಕ್ಸ್ ಮಾತುಗಳೆಲ್ಲಾ ಕೇವಲ ತಮಾಷೆಗಾಗಿ ಎಂದು ಸ್ಫಷ್ಟೀಕರಣ ನೀಡಿದ್ದಾರೆ.
ಇತ್ತೀಚೆಗಷ್ಟೇ ಟೈಮ್ಸ್ ನಿಯತಕಾಲಿಕೆಗಾಗಿ 36 ವರ್ಷದ ಕ್ರೀಡಾ ವರದಿಗಾರ್ತಿ ಚಾರ್ಲೊಟ್ ಎಡ್ವರ್ಡ್ಸ್ ನಡೆಸಿದ ಸಂದರ್ಶನದ ವೇಳೆ ಕ್ರಿಸ್ ಗೇಯ್ಲ್ ಸೆಕ್ಸ್ ಮಾತುಗಳಾಡಿದ್ದರು. ಕೆರಿಬಿಯನ್ ಕ್ರಿಕೆಟಿಗನ ಎಲ್ಲೆ ಮೀರಿದ ಹುಡುಗಾಟವನ್ನು ಮಾಜಿ ಕ್ರಿಕೆಟಿಗರಾದ ಆ್ಯಂಡ್ರೂ ಪ್ಲಿಂಟಾಫ್ ಮತ್ತು ಇಯಾನ್ ಚಾಪೆಲ್ ಕಟುವಾಗಿ ಟೀಕಿಸಿದ್ದರು.
ಪ್ರಕರಣ ಗಂಭೀರ ಸ್ವರೂಪ ಪಡೆದಿದೆ ಎಂದು ಭಾವಿಸಿದ ಗೇಲ್, ಸಂದರ್ಶನದ ವೇಳೆ ವರದಿಗಾರ್ತಿಯ ಬಳಿ ನಾನಾಡುವ ಸೆಕ್ಸ್ ಮಾತೆಲ್ಲಾ ಬರಿ ತಮಾಷೆಗಾಗಿ. ವೃಥಾ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತಿದೆ. ಯಾರನ್ನೂ ಅಗೌರವದಿಂದ ಕಾಣಬೇಕೆಂಬ ಉದ್ದೇಶದಿಂದ ಹೀಗೆಲ್ಲಾ ಮಾತಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಹಿಳಾ ವರದಿಗಾರ್ತಿ ಚಾರ್ಲೊಟ್ ಎಡ್ವರ್ಡ್ಸ್ ಜತೆಗಿನ ಸಂದರ್ಶನದ ವೇಳೆ ಗೇಯ್ಲ್ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಬ್ಯಾಟ್ ನನ್ನ ಬಳಿ ಇದೆ...ಅದನ್ನು ನಾನು ಎತ್ತಬಲ್ಲೆ ಎಂದು ನೀನು ಅಂದುಕೊಳ್ಳುತ್ತಿರಬಹುದು? ಆದರೆ, ಅದಕ್ಕಾಗಿ ನಿನ್ನೆರಡೂ ಕೈಗಳನ್ನು ಬಳಸಬೇಕಾಗುವುದು ಎಂಬ ಮಾತುಗಳನ್ನಾಡಿದ್ದರು.