ಎಂಎಸ್ ಧೋನಿ-ಗ್ಯಾರಿ ಕ್ರಿಸ್ಟನ್ 
ಕ್ರಿಕೆಟ್

ಏಕದಿನ ನಾಯಕತ್ವದಿಂದ ಧೋನಿಯನ್ನು ಕೆಳಗಿಳಿಸಿದರೆ ಅದು ದೊಡ್ಡ ತಪ್ಪಾಗುವುದು: ಗ್ಯಾರಿ ಕ್ರಿಸ್ಟನ್

ಟೀಂ ಇಂಡಿಯಾದ ಪ್ರಖ್ಯಾತ ನಾಯಕ ಎಂಎಸ್ ಧೋನಿಯನ್ನು ಏಕದಿನ ನಾಯಕತ್ವದಿಂದ ತೆಗೆದರೆ ದೊಡ್ಡ ಗಂಡಾಂತರ ಎಂದು ಮಾಜಿ ಟೀಂ ಇಂಡಿಯಾ ಕೋಚ್...

ಮುಂಬೈ: ಟೀಂ ಇಂಡಿಯಾದ ಪ್ರಖ್ಯಾತ ನಾಯಕ ಎಂಎಸ್ ಧೋನಿಯನ್ನು ಏಕದಿನ ನಾಯಕತ್ವದಿಂದ ತೆಗೆದರೆ ದೊಡ್ಡ ಗಂಡಾಂತರ ಎಂದು ಮಾಜಿ ಟೀಂ ಇಂಡಿಯಾ ಕೋಚ್ ಗ್ಯಾರಿ ಕ್ರಿಸ್ಟನ್ ಹೇಳಿದ್ದಾರೆ.

ಎರಡನೇ ಬಾರಿ ಟೀಂ ಇಂಡಿಯಾ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೋಚ್ ಗ್ಯಾರಿ ಕ್ರಿಸ್ಟನ್ ಧೋನಿ ಓರ್ವ ಅದ್ಭುತ ನಾಯಕ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದರೆ ಅದು ದೊಡ್ಡ ತಪ್ಪು ಎಂದು ಹೇಳಿದ್ದಾರೆ.

ಇದೇ ವೇಳೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದು ಅವರಿಗೆ ಏಕದಿನ ತಂಡದ ನಾಯಕತ್ವ ಜವಾಬ್ದಾರಿ ನೀಡುವುದು ಬೇಡವ ಎಂದು ಕೇಳಿದ್ದಕ್ಕೆ ಏನು ಪ್ರತಿಕ್ರಿಯೆ ನೀಡದ ಗ್ಯಾರಿ ಕ್ರಿಸ್ಟನ್, ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಿದರೆ ಅದು ದೊಡ್ಡ ತಪ್ಪು ಎಂದು ಹೇಳಿದ್ದಾರೆ.

ಸುದೀರ್ಘ ಅನುಭವದ ಮೂಲಕ ಓರ್ವ ಸಾಧಕ ತನ್ನ ವೃತ್ತಿ ಬದುಕಿನ ಕೊನೆಯವರೆಗೂ ಉತ್ತಮ ಸಾಧನೆಯನ್ನು ನೀಡಬಲ್ಲರು. ಒಂದು ವೇಳೆ ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸುವುದೇ ಆದರೆ 2019ರ ಏಕದಿನ ವಿಶ್ವಕಪ್ ನಲ್ಲಿ ಒಂದು ಅದ್ಭುತ ಪ್ರದರ್ಶನದ ಕೊರತೆ ಎದುರಿಸಬೇಕಾಗುತ್ತದೆ ಎಂದು ಗ್ಯಾರಿ ಕ್ರಿಸ್ಟನ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್