ನವದೆಹಲಿ: ಕ್ರಿಕೆಟಿಗ ಯುವರಾಜ್ ಸಿಂಗ್ ಗುರುವಾರ ಸಂಸತ್ ಭವನಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮದುವೆಗೆ ಆಮಂತ್ರಿಸಿದರು. ನವೆಂಬರ್ 30 ರಂದು ನಡೆಯುವ ಯುವರಾಜ್ ಸಿಂಗ್ ಹಾಗೂ ನಟಿ ಹಜೇಲ್ ಮದುವೆ ಸಮಾರಂಭಕ್ಕೆ ಬರುವಂತೆ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.
ತಮ್ಮ ತಾಯಿ ಶಬನಂ ಜೊತೆ ಆಗಮಿಸಿದ ಯುವಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಸಂಸದರು ಹಾಗೂ ಹಿತೈಷಿಗಳನ್ನು ಮದುವೆಗೆ ಆಮಂತ್ರಿಸಿದ್ದಾರೆ ಎನ್ನಲಾಗಿದೆ.
2011ರ ವಿಶ್ವಕಪ್ ಕ್ರಿಕೆಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟೀಂ ಇಂಡಿಯಾ ಆಲ್‌ರೌಂಡರ್ ಯುವರಾಜ್ ಸಿಂಗ್ ಪ್ರೇಯಸಿ ಹಜೇಲ್ ಜೊತೆ ಸಪ್ತಪದಿ ತುಳಿಯಲಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಬಾಲಿವುಡ್ ನಟಿ ಹಜೇಲ್ ಜೊತೆ ಯುವಿ ನಿಶ್ಚಿತಾರ್ಥವಾಗಿತ್ತು. ಹಜೇಲ್ ಬ್ರಿಟಿಷ್ ಪ್ರಜೆಯಾಗಿದ್ದು, ಆಕೆಯ ತಾಯಿ ಹಿಂದೂ ವಾಗಿದ್ದಾರೆ.
ನವೆಂಬರ್ 30 ರಂದು ಚಂಡಿಗಡದಲ್ಲಿ ಸಿಂಗ್ ರ ಸಂಪ್ರದಾಯದಂತೆ ವಿವಾಹ ನಡೆಯಲಿದೆ. ಹಾಗೆಯೇ ಡಿಸೆಂಬರ್ 2 ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 5 ಮತ್ತು 7 ರಂದು ದೆಹಲಿಯಲ್ಲಿ ಸಂಗೀತ್ ಮತ್ತು ಆರತಶ್ರತೆ ಕಾರ್ಯಕ್ರಮಗಳು ನಡೆಯಲಿವೆ.