ನ್ಯಾ. ಆರ್ ಎಂ ಲೋಧಾ 
ಕ್ರಿಕೆಟ್

ಬಿಸಿಸಿಐಗೆ ಪ್ರತ್ಯೇಕ ಲೆಕ್ಕ ಪರಿಶೋಧಕರನ್ನು ನೇಮಿಸಿ: ಲೋಧಾ ಸಮಿತಿಗೆ ಸುಪ್ರೀಂ ಆದೇಶ

ಮಾಧ್ಯಮ ಹಕ್ಕು, ಒಪ್ಪಂದಗಳು ಸೇರಿದಂತೆ ಬಿಸಿಸಿಐನ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಆಡಿಟರ್ ನೇಮಿಸಬೇಕು ಎಂದು ಲೋಧಾ ...

ನವದೆಹಲಿ: ಮಾಧ್ಯಮ ಹಕ್ಕು, ಒಪ್ಪಂದಗಳು ಸೇರಿದಂತೆ ಬಿಸಿಸಿಐನ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳಲು ಪ್ರತ್ಯೇಕ ಆಡಿಟರ್ ನೇಮಿಸಬೇಕು ಎಂದು ಲೋಧಾ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುವ ಮೂಲಕ , ಬಿಸಿಸಿಐ ಮೇಲೆ ಸುಪ್ರೀಂ ಮತ್ತೆ ಚಾಟಿ ಬೀಸಿದೆ.

ಬಿಸಿಸಿಐ ವ್ಯವಹಾರಗಳನ್ನು ಮತ್ತು ಖಾತೆಗಳನ್ನು ಆಡಿಟ್ ಮಾಡುವಂತೆ ಸೂಚಿಸಿದೆ. ಜತೆಗೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್​ಗೆ ಲೋಧಾ ಸಮಿತಿಯ ಮುಂದೆ ಹಾಜರಾಗಿ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವ ಸಂಬಂಧ ಸೂಚನೆ ಪಡೆದುಕೊಳ್ಳುವಂತೆ ತಿಳಿಸಿದೆ.

ಜೊತೆಗೆ ಐಸಿಸಿ ಅಧ್ಯಕ್ಷ ಶಸಾಂಕ್ ಮನೋಹರ್ ಅವರಿಗೆ ಸಮಿತಿಯ ಆದೇಶದ ಪ್ರತಿಯನ್ನು ತಲುಪಿಸುವಂತೆ ಲೋಧಾ ಸಮಿತಿ ಕಾರ್ಯದರ್ಶಿ ಅವರಿಗೆ  ಸೂಚಿಸಲಾಗಿದೆ. ಜತೆಗೆ ಟೆಂಡರ್ ಮತ್ತು ಗುತ್ತಿಗೆ ಮೊತ್ತದ ಮೇಲೂ ಸಹ ಗರಿಷ್ಠ ಪ್ರಮಾಣವನ್ನು ನಿಗದಿ ಮಾಡುವಂತೆ ತಿಳಿಸಿದೆ ನ್ಯಾಯಮೂರ್ತಿ ಟಿ.ಎಸ್ ಠಾಗೂರ್ ನೇತತ್ವದ ಪೀಠ ಸೂಚಿಸಿದೆ.

ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವವರೆಗೆ ರಾಜ್ಯ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಲಾರದು ಎಂದು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಆದೇಶಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನ: ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ- ಬಿಜೆಪಿ

SCROLL FOR NEXT