ನವದೆಹಲಿ: ಡಿಸೆಂಬರ್ ಮೊದಲ ವಾರದಲ್ಲಿ ನಟಿ ಹೇಜಲ್ ಕೀಚ್ ರನ್ನು ವಿವಾಹವಾಗುವುದಾಗಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿದ್ದಾರೆ.
ಡಿಸೆಂಬರ್ ಮೊದಲ ವಾರದಲ್ಲಿ ಮದುವೆಯಾಗುವುದಾಗಿ ಯುವರಾಜ್ ಸಿಂಗ್ ತಿಳಿಸಿದ್ದು ಯಾವ ದಿನ ಎನ್ನುವುದನ್ನು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.
ಡಿಸೆಂಬರ್ 12ಕ್ಕೆ ಯುವರಾಜ್ ಸಿಂಗ್ ಹುಟ್ಟುಹಬ್ಬ ಇರುವುದರಿಂದ ಅದಕ್ಕೂ ಮುನ್ನ ಮದುವೆ ಮಾಡಬೇಕೆನ್ನುವ ಯೋಚನೆಯಲ್ಲಿದ್ದೇವೆ ಎಂದು ಯುವತಿ ತಾಯಿ ಶಬನಂ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ ನಲ್ಲಿ ಇಂಡೋನೇಷಿಯಾದ ಬಾಲಿಯಲ್ಲಿ ಗೌಪ್ಯವಾಗಿ ಯುವಿ ಹಾಗೂ ಹೇಜಲ್ ಕೀಚ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು.