ಟೀಂ ಇಂಡಿಯಾ 
ಕ್ರಿಕೆಟ್

ಬಿಸಿಸಿಐಗೆ ಹಿನ್ನಡೆ: ಭಾರತದ ಪಾಲಿಗೆ ವೈರಿಯಾದ ಮಾಜಿ ಬಿಸಿಸಿಐ ಅಧ್ಯಕ್ಷ ಮನೋಹರ್

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಆಡಳಿತ ಹಾಗೂ ಸಂವಿಧಾನದ ಬದಲಾವಣೆ ಹಾಗೂ ಹೊಸ ಹಣಕಾಸು ಹಂಚಿಕೆ ಮಾದರಿ ವಿರೋಧಿಸಿದ್ದ ಬಿಸಿಸಿಐಗೆ ಭಾರೀ...

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಆಡಳಿತ ಹಾಗೂ ಸಂವಿಧಾನದ ಬದಲಾವಣೆ ಹಾಗೂ ಹೊಸ ಹಣಕಾಸು ಹಂಚಿಕೆ ಮಾದರಿ ವಿರೋಧಿಸಿದ್ದ ಬಿಸಿಸಿಐಗೆ ಭಾರೀ ಪೆಟ್ಟು ಬಿದ್ದಿದೆ. 
ದುಬೈನಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಆಡಳಿತ ಹಾಗೂ ಸಂವಿಧಾನ ಬದಲಾವಣೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪರವಾಗಿ 9 ಮತಗಳು ಚಲಾವಣೆಗೊಂಡರೆ ಹಣಕಾಸು ಹಂಚಿಕೆಗೆ ನೂತನ ಮಾದರಿ ಜಾರಿಗೆ ತರಲು ಐಸಿಸಿ ಪರ 8 ಮಂಡಳಿಗಳು ಮತ ಹಾಕಿದ್ದು ಬಿಸಿಸಿಐ ಜತೆಗಿದ್ದ ಜಿಂಬಾಬ್ವೆ ಹಾಗೂ ಬಾಂಗ್ಲಾದೇಶ ಮಂಡಳಿಗಳು ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿವೆ. ಈ ವಿಚಾರದಲ್ಲಿ ಬಿಸಿಸಿಐ ಬೆನ್ನಿಗೆ ನಿಂತಿದ್ದು ಲಂಕಾ ಮಂಡಳಿ ಮಾತ್ರ. 
ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು ಹೌದು ಮತ ಚಲಾವಣೆ ನಮ್ಮ ವಿರುದ್ಧವಾಗಿ ನಡೆದಿದೆ. ಬಿಸಿಸಿಐ ಈ ಮೊದಲೇ ವಿರೋಧಿಸುತ್ತಾ ಬಂದಿದ್ದ ಎರಡೂ ಬದಲಾವಣೆಗಳ ವಿರುದ್ಧವಾಗಿಯೇ ಮತ ಹಾಕಿತು. ಐಸಿಸಿಯ ಈ ಬದಲಾವಣೆಗಳನ್ನು ಯಾವುದೇ ಕಾರಣಕ್ಕೂ ನಾವು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸದ್ಯ ನಮ್ಮ ಮುಂದಿರುವ ಆಯ್ಕೆಗಳ ಬಗ್ಗೆ ವಿಶೇಷ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸದಸ್ಯರಿಗೆ ಪರಿಸ್ಥಿತಿ ಬಗ್ಗೆ ವಿವರಿಸಲಿದ್ದೇವೆ ಎಂದರು. 
ಬಿಗ್ ತ್ರೀ ಮಾದರಿ ಮುಂದುವರಿಸದಿದ್ದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದಾಗಿ ಬಿಸಿಸಿಐ ಎಚ್ಚರಿಕೆ ನೀಡಿತ್ತು. ಆದರೀಗ ಐಸಿಸಿ ಹೊಸ ಮಾದರಿ ಜಾರಿಗೆ ತರಲು ತೀರ್ಮಾನಿಸಿದೆ. ಗಡುವು ಮುಗಿದಿದ್ದರೂ ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟಿಸದ ಬಿಸಿಸಿಐ ಪಂದ್ಯಾವಳಿಯಿಂದ ಹೊರಗುಳಿಯಲಿದೆಯಾ ಎನ್ನುವದರ ಕುರಿತು ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು