ನವದೆಹಲಿ:ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗರು ಸದಾ ಸಕ್ರಿಯರಾಗಿರುತ್ತಾರೆ, ಆದರೆ ಯುವರಾಜ್ ಸಿಂಗ್ ಸ್ವಲ್ಪ ಭಿನ್ನ, ಫೇಸ್ ಬುಕ್, ಟ್ವಿಟ್ಟರ್ ಗಳಿಂದ ತುಸು ದೂರವೇ ಉಳಿದಿದ್ದ ಯುವಿ ಇತ್ತೀಚೆಗೆ ಫೇಸ್ ಬುಕ್ ನಲ್ಲಿ ತಮ್ಮ ಫೋಟ್ ಆಪ್ ಲೋಡ್ ಮಾಡಿದ್ದರು. ಈ ಫೋಟೋಗೆ ರೋಹಿತ್ ಶರ್ಮಾ ಮತ್ತು ಹರಭಜನ್ ಸಿಂಗ್ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ.
ಯುವರಾಜ್ ಸಿಂಗ್ ಶರ್ಟ್ ಹಾಕದ ಫೋಟೋಗೆ ಮೂಡ್ ಎಂಬ ಕ್ಯಾಪ್ಷನ್ ನೀಡಿ ಅಪ್ ಲೋಡ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್ ಸಿಂಗ್ ಸಲ್ಲು ಬಾಯ್ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಇದೇ ಪೋಸ್ಟ್ ಗೆ ಕಮೆಂಟ್ ಮಾಡಿರುವ ರೋಹಿತ್ ಶರ್ಮಾ ನೀವು ಮೂಡ್ ಎಂದು ಹೇಳಿದಾಗ ಯಾವ ರೀತಿ ಅರ್ಥ ಮಾಡಿಕೊಳ್ಳುತ್ತೀರಿ, ಇಲ್ಲಿ ಸ್ಪಷ್ಟವಾಗಿಲ್ಲ ಹೀಗಾಗಿ ಎಂದು ವಿವರಣೆ ನೀಡಲು ಹೇಳಿದ್ದಾರೆ.
ಈ ಇಬ್ಬರು ಕ್ರಿಕೆಟಿಗರು ಕಮೆಂಟ್ ಮಾಡಿದ ನಂತರ ನೂರಾರು ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಆಗಸ್ಟ್ 20 ರಿಂದ ಆರಂಭವಾಗಿರುವ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ ಯುವರಾಜ್ ಸಿಂಗ್ ಅವರನ್ನು ಕೈ ಬಿಡಲಾಗಿದೆ.