ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಲಂಕಾ ವಿರುದ್ಧದ 3ನೇ ಪಂದ್ಯದ ವೇಳೆ ಧೋನಿ ಮೈದಾನದಲ್ಲೇ ನಿದ್ರಿಸಿದ್ದು ಏಕೆ ಗೊತ್ತಾ!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಷ್ಟು ಶಾಂತ ಸ್ವಭಾವದವರೂ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ...

ಎಂಎಸ್ ಧೋನಿ
Vishwanath S
Updated On : 28 Aug 2017, 3:06 am
ಪಲ್ಲಿಕಿಲೆ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಷ್ಟು ಶಾಂತ ಸ್ವಭಾವದವರೂ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 
ಭಾರತ ವಿರುದ್ಧ ಮೂರನೇ ಪಂದ್ಯದಲ್ಲೂ ಶ್ರೀಲಂಕಾ ಸೋಲಲಿದೆ ಎಂದು ಗೊತ್ತಾದ ತಕ್ಷಣ ಶ್ರೀಲಂಕಾ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದರು. ಅಭಿಮಾನಿಗಳು ಲಂಕಾ ತಂಡದ ಆಟಗಾರರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಾಟಲಿಗಳನ್ನು ಮೈದಾನದ ಕಡೆಗೆ ಎಸೆದರು. 
ಇದರಿಂದಾಗಿ ಕೆಲಕಾಲ ಪಂದ್ಯ ಸ್ಥಗಿತಗೊಂಡಿತ್ತು. ಈ ವೇಳೆ ಭದ್ರತಾ ಅಧಿಕಾರಿಗಳು ಅಭಿಮಾನಿಗಳನ್ನು ಸಮಾಧಾನಿಸುತ್ತಿದ್ದರು. ಇತ್ತ ಮೈದಾನದಲ್ಲಿದ್ದ ಅಂಪೈರ್ ಗಳು ಹಾಗೂ ಲಂಕಾ ಆಟಗಾರರು ಚಿಂತೆಯಿಂದ ಪ್ರೇಕ್ಷಕರತ್ತ ನೋಡುತ್ತಿದ್ದರು. ಆದರೆ ಧೋನಿ ಮಾತ್ರ ಇದಕ್ಕೆ ಕಿವಿಗೊಡದೆ ಬ್ಯಾಟ್, ಹೆಲ್ಮೆಟ್, ಗ್ಲೌಸ್ ಎಲ್ಲಾ ಕಳಚಿಟ್ಟು ಪಿಚ್ ಪಕ್ಕದಲ್ಲೇ ಅಂಗಾತ ಮಲಗಿ ನಿದ್ರಿಸಿದರು. ಈ ಫೋಟೋ ಇದೀಗ ಟ್ವೀಟರ್ ನಲ್ಲಿ ವೈರಲ್ ಆಗಿದೆ. 

Advertisement

Advertisement

ಪ್ರೇಕ್ಷಕರ ದಾಂದಲೆಯಿಂದ ಪಂದ್ಯ ಅರ್ಧಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದರಿಂದ ಧೋನಿ ಮಲಗಿ ಕೊಂಚ ವಿಶ್ರಾಂತಿ ತೆಗೆದುಕೊಂಡು ಮತ್ತೇ ಬ್ಯಾಟ್ ಮಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement