ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಏಕದಿನ, ಟಿ20 ನಾಯಕನಾಗಿ ಎಂಎಸ್ ಧೋನಿ ಸಾಧನೆ

ಟೀಂ ಇಂಡಿಯಾದ ಸರ್ವಶ್ರೇಷ್ಠ ನಾಯಕ ಯಾರು ಎಂದರೆ ಎಂಎಸ್ ಧೋನಿ ಎಂದು ಹೇಳಬಹುದು. ಧೋನಿ ನಾಯಕತ್ವದಲ್ಲಿ ಭಾರತ ತಂಡ ಹಲವು ಸಾಧನೆಗಳಿಗೆ...

ಎಂಎಸ್ ಧೋನಿ
Vishwanath S
Updated On : 5 Jan 2017, 12:20 pm

ಟೀಂ ಇಂಡಿಯಾದ ಸರ್ವಶ್ರೇಷ್ಠ ನಾಯಕ ಯಾರು ಎಂದರೆ ಎಂಎಸ್ ಧೋನಿ ಎಂದು ಹೇಳಬಹುದು. ಧೋನಿ ನಾಯಕತ್ವದಲ್ಲಿ ಭಾರತ ತಂಡ ಹಲವು ಸಾಧನೆಗಳಿಗೆ ಭಾಜನವಾಗಿದೆ. ಧೋನಿ ನಾಯಕತ್ವದಲ್ಲಿ ಭಾರತ ಎರಡು ವಿಶ್ವಕಪ್ ಏಕದಿನ, ಟಿ20, ಮತ್ತು ಒಂದು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದೆ.

2007ರಲ್ಲಿ ಟಿ20 ವಿಶ್ವಕಪ್ ಜಯ
2007ರಲ್ಲಿ ಟಿ20 ಕ್ರಿಕೆಟ್ ನ ಚೊಚ್ಚಲ ವಿಶ್ವಕಪ್ ನಡೆಯಿತು. ಇದೇ ಮೊದಲ ಬಾರಿ ಭಾರತ ತಂಡದ ನಾಯಕರಾಗಿ ಆಯ್ಕೆಯಾದ ಧೋನಿ ತಂಡ ಕಪ್ ಗೆಲ್ಲುವಲ್ಲಿ ನೆರವಾದರು. 2014ರಲ್ಲಿ ಬಾಂಗ್ಲಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಭಾರತ ಫೈನಲ್ ಪಂದ್ಯದಲ್ಲಿ ಸೋಲು ಕಂಡಿತ್ತು.

2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ
2011ರಲ್ಲಿ ಎಂಎಸ್ ಧೋನಿ ನಾಯಕತ್ವದ ಟೀಂ ಇಂಡಿಯಾ ತಂಡ ಮುಂಬೈನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ. ಶ್ರೀಲಂಕಾ ವಿರುದ್ಧ 6 ವಿಕೆಟಗಳ ಜಯ ಸಾಧಿಸಿತು. 1983ರ ನಂತರ ಅಂದರೇ 28 ವರ್ಷಗಳ ಬಳಿಕ ಭಾರತ ವಿಶ್ವಕಪ್ ಗೆದ್ದ ಸಾಧನೆ ಮಾಡಿತು.

2013ರಲ್ಲಿ ಏಕದಿನ ಚಾಂಪಿಯನ್ಸ್ ಟ್ರೋಫಿ
2013ರಲ್ಲಿ ನಡೆದ ಏಕದಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಅತಿಥೇಯ ಇಂಗ್ಲೆಂಡ್ ತಂಡವನ್ನು ಧೋನಿ ಪಡೆ 5 ರನ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದಿತ್ತು.

ಕ್ರಿಕೆಟ್ ನ 3 ಮಾದರಿಯಲ್ಲಿ ಟೀಂ ಇಂಡಿಯಾ ನಂಬರ್ 1
ಎಂಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ನ ಮೂರು ಮಾದರಿಯಲ್ಲಿ ನಂಬರ್ 1 ಆಯಿತು. 2009ರಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ನಲ್ಲಿ ನಂಬರ್ 1 ಸ್ಥಾನಕ್ಕೇರಿ ದೀರ್ಘಕಾಲ ಆ ಸ್ಥಾನದಲ್ಲಿತ್ತು. ಟಿ20, ಏಕದಿನದಲ್ಲೂ ಭಾರತವನ್ನು ನಂಬರ್ 1 ಸ್ಥಾನಕ್ಕೇರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement