ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕತ್ವಕ್ಕೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿಗೆ ಕೊನೆಯ ಅವಕಾಶವಾಗಿ ಇಂಗ್ಲೆಂಡ್ ವಿರುದ್ದ ಅಭ್ಯಾಸ ಪಂದ್ಯವೊಂದಕ್ಕೆ ನಾಯಕತ್ವದ ಅವಕಾಶ ದೊರಕಿದ್ದು ಧೋನಿಯ ಕೊನೆಯ ನಾಯಕತ್ವದ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಅಭಿಮಾನಿಯೊಬ್ಬ ಧೋನಿ ಬ್ಯಾಟ್ ಮಾಡುವಾಗ ಕ್ರೀಡಾಂಗಣಕ್ಕೆ ಬಂದು ಧೋನಿಯ ಆಶೀರ್ವಾದ ಪಡೆಯಲು ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.
ಅಭಿಮಾನಿಯೊಬ್ಬ ಎಲ್ಲ ಅಡೆತಡೆಗಳನ್ನು ದಾಟಿ ಮೈದಾನಕ್ಕೆ ಬಂದು ಧೋನಿ ಪಾದಕ್ಕೆರಗಲು ಪ್ರಯತ್ನಿಸಿದ ಆಗ ಧೋನಿ ಪಿಚ್ ಮೇಲೆ ಬರಬೇಡ ಎಂದು ವಿನಂತಿಸಿಕೊಂಡರು. ಬಳಿಕ ಪೊಲೀಸರು ಆ ಅಭಿಮಾನಿಯನ್ನು ಹೊರಕ್ಕೆ ಎಳೆದೊಯ್ದರು. ಆದರೆ ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳಲು ಮುಂದಾಗಿಲ್ಲ.
ಇಂಗ್ಲೆಂಡ್ ಇಲೆವೆನ್ ತಂಡದ ವಿರುದ್ಧ ಟೀಂ ಇಂಡಿಯಾ ಎ ತಂಡ ಸೆಣೆಸಿದ ಮೊದಲ ಅಭ್ಯಾಸದ ಪಂದ್ಯವನ್ನು ಎಂಎಸ್ ಧೋನಿ ಮುನ್ನಡೆಸಿದರು. ಇದರಿಂದಾಗಿ ಮುಂಬೈ ಬ್ರೆಬೋರ್ನ್ ಕ್ರೀಡಾಂಗಣ ಅಭಿಮಾನಿಗಳಿಂದ ಕಿಕ್ಕಿರಿದಿತ್ತು. ಧೋನಿ ಕ್ರೀಸ್ ಗೆ ಇಳಿಯುತ್ತಿದ್ದಂತೆ ಅಭಿಮಾನಿಗಳು ಧೋನಿ ಧೋನಿ ಎಂಬ ಜೈಕಾರ ಕೂಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics