ಸಂಗ್ರಹ ಚಿತ್ರ 
ಕ್ರಿಕೆಟ್

ಭಾರತ ಕ್ರಿಕೆಟ್ ತಂಡದಲ್ಲಿ ಎಸ್ಸಿ, ಎಸ್ಟಿಗಳಿಗೆ ಮೀಸಲಾತಿ ನೀಡಿ!

ಭಾರತ ಕ್ರಿಕೆಟ್ ತಂಡದಲ್ಲಿ ಎಸ್ ಸಿ, ಎಸ್ ಟಿಗಳಿಗೆ ಮೀಸಲಾತಿ ನೀಡಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಲೆ ಹೇಳಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಎಸ್ ಸಿ, ಎಸ್ ಟಿಗಳಿಗೆ ಮೀಸಲಾತಿ ನೀಡಿ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಲೆ ಹೇಳಿದ್ದಾರೆ.

ಈ ಹಿಂದೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಸೋತ ಹಿನ್ನಲೆಯಲ್ಲಿ ತಂಡ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಕೇಂದ್ರ ಸಚಿವರು, ಭಾರತ ತಂಡದಲ್ಲಿ ಎಸ್ ಸಿ, ಎಸ್ ಟಿಗಳಿಗೆ  ಮೀಸಲಾತಿ ನೀಡಿದರೆ ತಂಡ ಬಲಿಷ್ಠವಾಗುತ್ತದೆ ಎಂದು ಹೇಳಿದ್ದಾರೆ.

ಜಿಎಸ್ ಟಿ ಅಧಿವೇಶನದ ಬಳಿಕ ಅಠಾವಲೆ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಈ ವೇಳೆ ಪಾಕಿಸ್ತಾನದ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ.

ಭಾರತ ತಂಡ ಪ್ರಸ್ತುತ ನಿಜಕ್ಕೂ ಕಳಪೆ ಪ್ರದರ್ಶನ ನೀಡುತ್ತಿದೆ. ಇದೇ ಕಾರಣಕ್ಕೆ ನಾನು ತಂಡದಲ್ಲಿ ಎಸ್ ಸಿ, ಎಸ್ ಟಿ ಆಟಗಾರರಿಗೆ ತಂಡದ ಸ್ಥಾನ ಕಲ್ಪಿಸುವ ಉದ್ದೇಶದಿಂದ ಮೀಸಲಾತಿಗೆ ಆಗ್ರಹಿಸುತ್ತಿದ್ದೇನೆ. ಈ ಹಿಂದೆ  ತಂಡದಲ್ಲಿ ವಿನೋದ್ ಕಾಂಬ್ಳಿ ಸಮುದಾಯವನ್ನು ಪ್ರತಿನಿಧಿಸಿದ್ದರು. ಆದರೆ ಈಗ ನಮ್ಮ ಸಮುದಾಯದಿಂದ ಯಾವೊಬ್ಬ ಆಟಗಾರ ಕೂಡ ಇಲ್ಲ. ಒಂದು ವೇಳೆ ತಂಡದಲ್ಲಿ ಎಸ್ ಸಿ, ಎಸ್ ಟಿಗಳಿಗೆ ಮೀಸಲಾತಿ ದೊರೆತಿದ್ದೇ ಆದರೆ  ಆಗ ಖಂಡಿತಾ ತಂಡ ಬಲಿಷ್ಠವಾಗಿರುತ್ತದೆ. ಆಗ ತಂಡದಲ್ಲಿ ನಮ್ಮ ಸಮುದಾಯದ ಕ್ರಿಕೆಟಿಗರೂ ಕೂಡ ಮಿಂಚುತ್ತಾರೆ ಎಂದು ಅಠಾವಲೆ ಹೇಳಿದ್ದಾರೆ.

ತಮ್ಮ ಬೇಡಿಕೆ ಕ್ರಿಕೆಟ್ ಗೆ ಮಾತ್ರ ಸೀಮಿತವಾಗಿಲ್ಲ. ಇತರೆ ಕ್ರೀಡೆಗಳಲ್ಲೂ ಎಸ್ ಸಿ, ಎಸ್ ಟಿಗಳಿಗೆ ಮೀಸಲಾತಿ ನೀಡಬೇಕು. ಅಂತೆಯೇ ತಮ್ಮ ಈ ಬೇಡಿಕೆಯಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಾರಿಯಾಗುವಂತೆ  ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!