ವಿರಾಟ್ ಕೊಹ್ಲಿ 
ಕ್ರಿಕೆಟ್

ವಿರಾಟ್ ಕೊಹ್ಲಿ ಬಹುಶಃ ಮುರಿಯಲಾಗದ ಐದು ಸಾರ್ವಕಾಲಿಕ ದಾಖಲೆಗಳು

ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳು ಸೃಷ್ಠಿಯಾಗುವುದು ಆ ದಾಖಲೆಗಳು ಮುರಿಯುವುದು ಸಾಮಾನ್ಯ. ಇನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಹಲವು...

ಕ್ರಿಕೆಟ್ ಜಗತ್ತಿನಲ್ಲಿ ದಾಖಲೆಗಳು ಸೃಷ್ಠಿಯಾಗುವುದು ಆ ದಾಖಲೆಗಳು ಮುರಿಯುವುದು ಸಾಮಾನ್ಯ. ಇನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಹಲವು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಅಂತಾ ವಿರಾಟ್ ಕೊಹ್ಲಿ ಸಹ ಮುರಿಯಲು ಬಹುಶ ಸಾಧ್ಯವಾಗದ ಐದು ಸಾರ್ವಕಾಲಿಕ ದಾಖಲೆಗಳು ಹೀಗಿವೆ. 
ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ನ  ಮೂರು ಮಾದರಿಗಳಲ್ಲಿ ಉತ್ತಮವಾಗಿ ಆಡುತ್ತಿದ್ದು ಹಲವು ದಾಖಲೆಗಳನ್ನು ಬರೆದಿದ್ದಾರೆ. ಇತ್ತೀಚೆಗಷ್ಟೇ ಏಕದಿನದಲ್ಲಿ ಕಡಿಮೆ ಪಂದ್ಯಗಳಲ್ಲಿ 8 ಸಾವಿರ ರನ್ ಸಿಡಿಸಿದ ದಾಖಲೆ ಮಾಡಿದ್ದಾರೆ. 
ಕೊಹ್ಲಿ ಬಹುಶಃ ಮುರಿಯಲು ಸಾಧ್ಯವಾಗದ ಐದು ದಾಖಲೆಗಳು
* ಏಕದಿನ ಕ್ರಿಕೆಟ್ ನಲ್ಲಿ 18,426 ರನ್ ದಾಖಲೆ
ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಓರ್ವ ಅಪ್ರತೀಮ ಆಟಗಾರ. ಸಚಿನ್ ಅವರು ಮಾಡಿರದ ದಾಖಲೆಗಳೇ ಇಲ್ಲ. ಅವರು ಮಾಡಿರುವ ದಾಖಲೆಗಳನ್ನು ಇತ್ತೀಚೆಗೆ ಕೊಹ್ಲಿ ಮುರಿಯುತ್ತಾ ಬಂದಿದ್ದಾರೆ. ಈ ಪೈಕಿ ಸಚಿನ್ ಅವರು ಏಕದಿನ ಕ್ರಿಕೆಟ್ ನಲ್ಲಿ ಸಿಡಿಸಿರುವ 18426 ರನ್ ಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯುವುದು ಬಹುಶ ಸಾಧ್ಯವಿಲ್ಲ. ಏಕೆಂದರೆ ಸಚಿನ್ ಏಕದಿನ ಕ್ರಿಕೆಟ್ ನಲ್ಲಿ ಇಷ್ಟು ರನ್ ಸಿಡಿಸಲು 463 ಪಂದ್ಯಗಳನ್ನು ಆಡಿದ್ದರು. ಸಚಿನ್ ಸುದೀರ್ಘವಾಗಿ ಟೀಂ ಇಂಡಿಯಾ ತಂಡದಲ್ಲಿ ಇದ್ದಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಆದರೆ ಕೊಹ್ಲಿ ಅಷ್ಟು ಸುದೀರ್ಘವಾಗಿ ತಂಡದಲ್ಲಿ ಇರುತ್ತಾರಾ ಎಂಬುದು ಪ್ರಶ್ನೆ. ಸದ್ಯ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ 189 ಪಂದ್ಯಗಳನ್ನು ಆಡಿ 8,257 ರನ್ ಸಿಡಿಸಿದ್ದಾರೆ. 
* ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ 400 ರನ್ ದಾಖಲೆ
ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ನಾಲ್ಕು ಸರಣಿಗಳಲ್ಲಿ ಸತತ ನಾಲ್ಕು ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ ಇನ್ನು ತ್ರಿಶತಕದ ಗಡಿ ದಾಟಿಲ್ಲ. ಕೊಹ್ಲಿ ಇನ್ನಿಂಗ್ಸ್ ಒಂದರಲ್ಲಿ ಸುದೀರ್ಘವಾಗಿ ಬ್ಯಾಟ್ ಮಾಡಿಲ್ಲ. ಅವರ ಆಕ್ರಮಣಕಾರಿ ಆಟ ಅವರನ್ನು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಬ್ರೈನ್ ಲಾರಾ ಇನ್ನಿಂಗ್ಸ್ ಒಂದರಲ್ಲಿ 400 ರನ್ ಸಿಡಿಸಿದ್ದ ದಾಖಲೆಯನ್ನು ಮುರಿಯಲು ಬಿಡುವುದಿಲ್ಲ. 
* ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೈಯಕ್ತಿಕ 264 ರನ್ ದಾಖಲೆ 
ಟೀಂ ಇಂಡಿಯಾದ ಆಟಗಾರ ರೋಹಿತ್ ಶರ್ಮಾ ಏಕದಿನ ಪಂದ್ಯವೊಂದರಲ್ಲಿ ವೈಯಕ್ತಿಕ ಗರಿಷ್ಠ ರನ್ ಪೇರಿಸಿದ ಅಗ್ರ ಆಟಗಾರನಾಗಿದ್ದಾರೆ. ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ ಪೇರಿಸಿದ ಅಗ್ರಮಾನ್ಯ ಆಟಗಾರನಾಗಿ ರೋಹಿತ್ ಶರ್ಮಾ ಖ್ಯಾತರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯವೊಂದರಲ್ಲಿ ರೋಹಿತ್ ಶರ್ಮಾ ಇನ್ನಿಂಗ್ಸ್ ಒಂದರಲ್ಲಿ 264 ರನ್ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್ ನ ವೈಯಕ್ತಿಕ ಗರಿಷ್ಠ ರನ್ ಆಗಿದೆ. ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ಆರಂಭಿಕರಾಗಿ ಈ ಸಾಧನೆ ಮಾಡಿದ್ದಾರೆ. ಆದರೆ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದರಿಂದ ಅವರಿಗೆ ಈ ಸಾಧನೆ ಮಾಡುವುದು ಕಷ್ಟ. 
* ಟೆಸ್ಟ್ ನಲ್ಲಿ 15921 ರನ್ ದಾಖಲೆ
ಟೀಂ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ಏಕದಿನ ಪಂದ್ಯದಂತೆ ಟೆಸ್ಟ್ ಕ್ರಿಕೆಟ್ ನಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರು 200 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅದರಲ್ಲಿ 15,921 ರನ್ ಸಿಡಿಸಿದ್ದಾರೆ. ಈ ಸಾಧನೆಯನ್ನು ಈ ಹಿಂದಿನ ಯಾವ ಆಟಗಾರನು ಮಾಡಿಲ್ಲ. ವಿರಾಟ್ ಕೊಹ್ಲಿ ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ 57 ಪಂದ್ಯಗಳನ್ನು ಆಡಿದ್ದು 4497 ರನ್ ಸಿಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಆಡುವುದು ಕಡಿಮೆಯಾಗುತ್ತಿದ್ದು ಇದೇ ಕಾರಣಕ್ಕೆ ಈ ಸಾಧನೆಯನ್ನು ಕೊಹ್ಲಿ ಮುರಿಯುವುದು ಅಸಾಧ್ಯ. 
* 200 ಟೆಸ್ಟ್ ಪಂದ್ಯ ಆಡುವುದು
ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾದಲ್ಲಿ ಸುದೀರ್ಘವಾಗಿ ಆಡಿದ ಏಕೈಕ ಆಟಗಾರ. 20 ವರ್ಷಗಳ ಕಾಲ ತಂಡದಲ್ಲಿದ್ದ ಸಚಿನ್ ಟೆಸ್ಟ್ ನಲ್ಲಿ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಸಚಿನ್ ಬಿಟ್ಟರೆ ಮತ್ಯಾವ ದಿಗ್ಗಜ ಆಟಗಾರನೂ 170 ಪಂದ್ಯಗಳಿಗಿಂತಲೂ ಹೆಚ್ಚು ಪಂದ್ಯಗಳಲ್ಲಿ ಆಡಿಲ್ಲ. ವಿರಾಟ್ ಕೊಹ್ಲಿ ಸದ್ಯ 57 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅವರು 200 ಟೆಸ್ಟ್ ಪಂದ್ಯಗಳಲ್ಲಿ ಆಡುವುದು ಅಸಾಧ್ಯದ ಮಾತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!