ಹುಬ್ಬಳ್ಳಿ: ಉದಯೋನ್ಮುಖ ಕ್ರಿಕೆಟ್ ಆಟಗಾರ ಹುಬ್ಬಳ್ಳಿಯ ಶುಭಂ ಗೌತಮ್ ಆಕಸ್ಮಿಕ ಸಾವು ಅವರ ಪೋಷಕರನ್ನು ಆಘಾತಕ್ಕೀಡು ಮಾಡಿದೆ.
ದಾವಣಗೆರೆ ಆಸ್ಪತ್ರೆಯಲ್ಲಿ ಶುಭಂ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ ನಂತರ ಹುಬ್ಬಳ್ಳಿಯಲ್ಲಿ ಅವರ ಅಂತ್ಯ ಸಂಸ್ಕಾರದ ವೇಳೆ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ನಗರದ ಗಣೇಶ್ ಪೇಟೆ ಸರ್ಕಲ್ ನಲ್ಲಿ ರಸ್ತೆ ಬ್ಲಾಕ್ ಮಾಡಿದ ಸಂಬಂಧಿಕರು ಶುಭಂ ಸಾವು ಸ್ವಾಭಾವಿಕವಾದುದ್ದಲ್ಲ, ಯಾರೋ ಆತನನ್ನು ಕೊಂದಿದ್ದಾರೆ. ಆತ ತುಂಬಾ ಆರೋಗ್ಯದಿಂದ ಇದ್ದ, ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳು ಇರಲಿಲ್ಲ ಎಂದು ಆತನ ಪೋಷಕರು ಹೇಳಿದ್ದಾರೆ.
ಪ್ರಕರಣ ಸಂಬಂಧ ತನಿಖೆಗೆ ಆಗ್ರಹಿಸಿ ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಲು ಸಂಬಂಧಿಕರು ಯತ್ನಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂಡರ್ 23 ಅಂತರ ವಲಯ ಕ್ರಿಕೆಟ್ ಟೂರ್ನಮೆಂಟ್ ಆಡಲು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಹರಿಹರ ಬಳಿ ಗೌತಮ್ ಗೆ ಹೃದಯಾಘಾತವಾಗಿದೆ. ಕೂಡಲೇ ಅವರ ಜೊತೆಗಿದ್ದ ಇಬ್ಬರು ತಂಡದ ಜೊತಯಾಟಗಾರರು ಅವರನ್ನು ದಾವಣೆಗೆರೆಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಪರಿಶೀಲಿಸಿದ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದರು.
ಈ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಎಂದು ಪೊಲೀಸರು ಹೇಳಿದ್ದಾರೆ.
ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಪ್ರತಿನಿಧಿಸುತ್ತಿದ್ದ ಶುಭಂ ಗೌತಮ್ ಅವರು ಬಲಗೈ ವೇಗದ ಬೌಲರ್ ಆಗಿದ್ದರು. ಬೆಂಗಳೂರಿನ ಯಂಗ್ ಲಯನ್ಸ್ ತಂಡದ ಪರವೂ ಕೆಲ ಕಾಲ ಆಡಿದ್ದರು. ಹುಬ್ಬಳ್ಳಿ ಪ್ರೀಮಿಯರ್ ಲೀಗ್ (ಎಚ್‌ಪಿಎಲ್) ಟೂರ್ನಿಯಲ್ಲಿ ಮುಂಡಗೋಡ ತಂಡದ ಪರ ಆಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics