ಕ್ರಿಕೆಟ್

ರಹಾನೆಯಿಂದಾಗಿ ತಂಡದ ಸಾಮರ್ಥ್ಯ ಹೆಚ್ಚಿದೆ: ವಿರಾಟ್ ಕೊಹ್ಲಿ

Srinivasamurthy VN

ಪೋರ್ಟ್ ಆಫ್ ಸ್ಪೈನ್: ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಅಂಜಿಕ್ಯಾ ರಹಾನೆ ಅವರನ್ನು ನಾಯಕ ಕೊಹ್ಲಿ ಹಾಡಿ ಹೊಗಳಿದ್ದಾರೆ.

ನಿನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೊಹ್ಲಿ,  ಅಜಿಂಕ್ಯಾ ರಹಾನೆಯಿಂದಾಗಿ ತಂಡದ ಸಾಮರ್ಥ್ಯ ಹೆಚ್ಚಿದ್ದು, ರಹಾನೆ ಆರಂಭಿಕರಾಗಿ ಮತ್ತು ಮಧ್ಯಮ  ಕ್ರಮಾಂಕದಲ್ಲಿಯೂ ಉತ್ತಮ ಬ್ಯಾಟಿಂಗ್ ಮಾಡಬಲ್ಲರು. ಎರಡೆರಡು ಕ್ರಮಾಂಕದಲ್ಲಿ ಆಡಬಲ್ಲ ಕ್ರಿಕೆಟಿಗರು ಕೆಲವೇ ಮಂದಿಯಾಗಿದ್ದು, ಇದರಲ್ಲಿ ರಹಾನೆ ಕೂಡ ಒಬ್ಬರು. ಬ್ಯಾಟಿಂಗ್ ಗೆ ಇಳಿದಾಗ ಒತ್ತಡವಿಲ್ಲದೇ ಆಡುತ್ತಾರೆ. ತಮ್ಮ  ಆಟವನ್ನು ಖುಷಿಯಿಂದ ಆಡುತ್ತಾರೆ. ಅದೇ ಅವರ ಯಶಸ್ಸಿನ ರಹಸ್ಯ ಎನ್ನಬಹದು ಎಂದು ಕೊಹ್ಲಿ ಹೇಳಿದ್ದಾರೆ.

ಅಂತೆಯೇ ಆರಂಭಿಕರಾಗಿ ಮತ್ತು ಮಧ್ಯಮ ಕ್ರಮಾಂಕದಲ್ಲಿ ರಹಾನೆ ಹೆಚ್ಚೆಚ್ಚು ರನ್ ಪೇರಿಸುತ್ತಾರೆ.  ಹೀಗಾಗಿ ತಂಡದ ಉಳಿದ ಬ್ಯಾಟ್ಸಮನ್ ಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ರಹಾನೆ ಇದ್ದಾಗ ಓರ್ವ ಬ್ಯಾಟ್ಸಮನ್ ನನ್ನು  ಕಡಿತಗೊಳಿಸಿ ಓರ್ವ ಹೆಚ್ಚುವರಿ ಬೌಲರ್ ನನ್ನು ಕಣಕ್ಕಿಳಿಸುವ ಅವಕಾಶ ಸಿಕ್ಕಂತಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

ಇನ್ನು ನಿನ್ನೆ ನಡೆದ ಪಂದ್ಯದಲ್ಲಿ ರಹಾನೆ ವಿಂಡೀಸ್ ವಿರುದ್ಧ 103 ರನ್ ಸಿಡಿಸಿದ್ದರು. ರಹಾನೆ ಅವರ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಭಾರತ 43 ಓವರ್ ಗಳಲ್ಲಿ 310 ರನ್ ಗಳಿಸಿತ್ತು.

SCROLL FOR NEXT