ಆಂಟಿಗುವಾ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಇತ್ತೀಚಿನ ಪ್ರದರ್ಶನದ ಬಗ್ಗೆ ಹಲವು ಟೀಕೆಗಳು ಕೇಳಿ ಬಂದಿತ್ತು, ಇದರ ಬೆನ್ನಲ್ಲೇ ನಿನ್ನೆ ವೆಸ್ಟ್ ಇಂಡೀಸ್ ನ ಆ್ಯಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಧೋನಿ ಅಜೇಯ 78 ರನ್ ಗಳನ್ನು ಕಲೆಹಾಕಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರು ಧೋನಿ, ನಾನು ವೈನ್ ಇದ್ದಂತೆ, ವೈನ್ ಗೆ ಹೆಚ್ಚು ವಯಸ್ಸಾದಂತೆ ಅದರ ರುಚಿಯೂ ಹೆಚ್ಚಾಗುತ್ತದೆ, ನಾನು ಅದೇ ರೀತಿ ಎಂದು ಧೋನಿ ತಮ್ಮನ್ನು ವೈನ್ ಗೆ ಹೋಲಿಸಿಕೊಂಡಿದ್ದಾರೆ.
79 ಬಾಲ್ ಗಳಿಗೆ 78 ರನ್ ಮಾಡಿ ಸಾಧನೆ ಮಾಡಿರುವ ಧೋನಿ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ನಾನು ವೈನ್ ನಂತೆ ಎಂದು ಹೇಳಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಅಗ್ರ ಕ್ರಮಾಂಕದ ಸ್ಕೋರ್ ಮಾಡಬೇಕೆಂಬ ಪ್ರಯತ್ನದಲ್ಲಿದ್ದೆ. ಆ ಅವಕಾಶ ಈಗ ಸಿಕ್ಕಿದೆ ಎಂದು ಹೇಳಿದ್ದಾರೆ.
ಇದು ವಿಕೆಟ್ ನ ಸ್ವಭಾವವೆಂದು ನನಗೆ ಅನ್ನಿಸುತ್ತದೆ, ವಿವಿಧ ಸಮಯಗಳಲ್ಲಿ ಬೌನ್ಸ್ ಆಗುತ್ತಿರುತ್ತದೆ. ಈ ಹಂತದಲ್ಲಿ ಸಹಭಾಗಿತ್ವದಲ್ಲಿ ಆಡುವುದು ಅತಿ ಪ್ರಮುಖವಾಗಿದೆ. ನನ್ನ ಮನಸ್ಸಿನಲ್ಲಿ 250 ರ ಗುರಿಯಿತ್ತು, ನಾನು ಕೊನೆಯಲ್ಲಿ ಕ್ರೀಸ್ ಗೆ ಬಂದೆ. ಕೆಲವೊಂದು ಬೌಲರ್ ಗಳ ಮೇಲೆಯೂ ಅವಲಂಬಿತವಾಗಿರುತ್ತದೆ, ಆದರೆ ಅವರೆಲ್ಲರೂ ಉತ್ತಮವಾಗಿ ಬೌಲ್ ಮಾಡಿದರು ಎಂದು ಧೋನಿ ಅಭಿಪ್ರಾಯ ಪಟ್ಟಿದ್ದಾರೆ.
ಕುಲ್ ದೀಪ್ ಐಪಿಲ್ ನಲ್ಲಿ ಭಾರೀ ಪ್ರಮಾಣದಲ್ಲಿ ಕ್ರಿಕೆಟ್ ಆಡಿದ್ದಾರೆ. ಆದರೆ ಅಂತರಾಷ್ಟ್ರಿಯ ಕ್ರಿಕೆಟ್ ನಲ್ಲಿ ಎಲ್ಲಿ ನಿಮ್ಮ ವೈವಿಧ್ಯತೆ ತೋರಿಸಬೇಕು ಎಂಬುದು ಮುಖ್ಯವಾಗುತ್ತದೆ ಎಂದು ಸ್ಪಿನ್ನರ್ ಗಳಿಗೆ ಸಲಹೆ ನೀಡಿದ್ದಾರೆ.
ಆತ 5-10 ಪಂದ್ಯ ಆಡಿರಬಹುದು, ತನನ್ನು ತಾನು ಆತ ಅರ್ಥ ಮಾಡಿಕೊಳ್ಳಬೇಕು. ಕಳೆದ ಪಂದ್ಯಕ್ಕೆ ಹೋಲಿಸಿದರೇ ಈ ಬಾರಿ ಕುಲ ದೀಪ್ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಧೋನಿ ಹೇಳಿದ್ದಾರೆ.