ಐಪಿಎಲ್ 
ಕ್ರಿಕೆಟ್

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಐಪಿಎಲ್ ವೇಳಾಪಟ್ಟಿ ಬದಲು

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ...

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. 
ದೆಹಲಿ ಪಾಲಿಕೆ ಚುನಾವಣೆ ಏಪ್ರಿಲ್ 22ರಂದು ನಡೆಯಲಿದ್ದು ಅದೇ ದಿನ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಮಧ್ಯಾಹ್ನ 4 ಗಂಟೆಗೆ ನಡೆಯಬೇಕಿತ್ತು. ಹೀಗಾಗಿ ಈ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸಲಾಗಿದೆ ಮತ್ತು ಪಂದ್ಯವನ್ನು ರಾತ್ರಿ 8 ಗಂಟೆಗೆ ಮುಂದೂಡಲಾಗಿದೆ. 
ಈ ದಿನ ರೈಸಿಂಗ್ ಪುಣೆ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಪುಣೆಯಲ್ಲಿ ರಾತ್ರಿ 8 ಗಂಟೆಗೆ ನಡೆಯಬೇಕಿತ್ತು. ಆದರೆ ಹೊಸವೇಳಾಪಟ್ಟಿಯಂತೆ ಈ ಪಂದ್ಯವನ್ನು ಮಧ್ಯಾಹ್ನ 4 ಗಂಟೆಗೆ ನಡೆಸಲು ತೀರ್ಮಾನಿಸಲಾಗಿದೆ.
ಅದೇ ರೀತಿ ಮೇ 6ರಂದು ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯವನ್ನು ಹೊಸ ವೇಳಾಪಟ್ಟಿಯಂತೆ ದೆಹಲಿಗೆ ವರ್ಗಾಯಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಧಾನ ಬಯಸುತ್ತಿದ್ದಾರೆ ಆದರೆ, ನಮಗೆ ಆಸಕ್ತಿಯೇ ಇಲ್ಲ: ಇರಾನ್ ಇನ್ನೂ ಬೆಲೆ ತೆರಬೇಕಿದೆ; ಡೊನಾಲ್ಡ್ ಟ್ರಂಪ್

US-Iran ಸಮರ ತೀವ್ರ: 11ನೇ ದಿನವೂ ಅಮೆರಿಕದಿಂದ ಭೀಕರ ವಾಯುದಾಳಿ; ವಿಫಲವಾದ ಕದನ ವಿರಾಮ ಒಪ್ಪಂದ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನೆಡೆ

ವಿದ್ಯಾರ್ಥಿಗಳಿಗೆ ಗೊಂದಲವಲ್ಲ, ಭರವಸೆ ಬೇಕು; ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು 'ರಾಜಕೀಯ ದಾಳ'ವಾಗಿ ಬಳಸುತ್ತಿದ್ದಾರೆ: ಧರ್ಮೇಂದ್ರ ಪ್ರಧಾನ್ ವಾಗ್ದಾಳಿ

ಅಮೆರಿಕಕ್ಕೆ ದುಬಾರಿಯಾದ Iran ಕದನ: ಬಿಲಿಯನ್ ಗಟ್ಟಲೆ ಡಾಲರ್ ನಷ್ಟ, ಹೆಚ್ಚುವರಿ ಅನುದಾನಕ್ಕೆ Trump ಮೊರೆ..!

ಪಾಕಿಸ್ತಾನಕ್ಕೆ Iran ರಹಸ್ಯ ಸಂದೇಶ: Asim Munir ಜೊತೆ ಮಹತ್ವದ ಮಾತುಕತೆ, Khamenei ಕಳುಹಿಸಿದ ಆ ರಹಸ್ಯ ಪತ್ರದಲ್ಲೇನಿದೆ?