ಕ್ರಿಕೆಟ್

ಐಸಿಸಿ ಟಿ20 ರ್ಯಾಂಕಿಂಗ್ ನಲ್ಲಿ 4ನೇ ಸ್ಥಾನಕ್ಕೆ ಕುಸಿದ ಭಾರತ

Lingaraj Badiger
ದುಬೈ: ಐಸಿಸಿ ಟಿ20 ಅಂತರರಾಷ್ಟ್ರೀಯ ತಂಡಗಳ ವಾರ್ಷಿಕ ರ್ಯಾಂಕಿಂಗ್ ನಲ್ಲಿ ಭಾರತ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
2017ರ ಮೇ 1ರ ವಾರ್ಷಿಕ ಪರಿಷ್ಕೃತ ಪಟ್ಟಿಯಲ್ಲಿ ಭಾರತ ತಂಡ ಆರು ಪಾಯಿಂಟ್‌ಗಳ ಕಳೆದುಕೊಳ್ಳುವ ಮೂಲಕ 118 ಪಾಯಿಂಟ್‌ ಗಳಿಸಿದೆ. 
125 ಪಾಯಿಂಟ್‌ ಗಳಿಸಿರುವ ನ್ಯೂಜಿಲೆಂಡ್‌ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಇಂಗ್ಲೆಂಡ್‌ ತಂಡ ಎರಡನೇ ಹಾಗೂ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ. ಈ ಎರಡೂ ತಂಡಗಳು ತಲಾ 121 ಪಾಯಿಂಟ್‌ ಗಳಿಸಿವೆ.
ಪಾಕಿಸ್ತಾನ ಐದು ಪಾಯಿಂಟ್‌ ಗಳಿಸುವ ಮೂಲಕ 121 ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್‌ ತಂಡವನ್ನು ಸರಿಗಟ್ಟಿದೆ.
SCROLL FOR NEXT