ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೆ ಈಡೆನ್ ಗಾರ್ಡನ್ಸ್ ಗೆ ಬರುತ್ತದೆ. ಆದರೆ ಪಂದ್ಯವನ್ನಾಡಲು ಅಲ್ಲ, ಐಪಿಎಲ್ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಸಂಭ್ರಮಾಚರಣೆ ಮಾಡಲು ಎಂದು ಬಾಲಿವುಡ್ ನಟ, ಕೆಕೆಆರ್ ತಂಡದ ಮಾಲಿಕ ಶಾರೂಖ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೇ.13 ರಂದು ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲು ಕಂಡಿತ್ತು. ಪಂದ್ಯದ ನಂತರ ಪ್ರತಿಕ್ರಿಯೆ ನೀಡಿರುವ ಕೆಕೆಆರ್ ತಂಡದ ಮಾಲಿಕ ಶಾರೂಖ್ ಖಾನ್, ನಾವು ಟ್ರೋಫಿಯೊಂದಿಗೆ ಈಡೆನ್ ಗಾರ್ಡನ್ಸ್ ಗೆ ವಾಪಸ್ಸಾಗುತ್ತೇವೆ ಎಂದು ಹೇಳಿದ್ದಾರೆ.
ಎರಡು ಬಾರಿ ಚಾಂಪಿಯನ್ ಗಳಾಗಿರುವ ಕೆಕೆಆರ್ 14 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿದ್ದು 5 ಪಂದ್ಯಗಳನ್ನು ಸೋತು 3 ನೇ ಸ್ಥಾನದಲ್ಲಿದೆ, ಫೈನಲ್ ಪ್ರವೇಶಿಸಬೇಕಾದರೆ 3 ಪಂದ್ಯಗಳನ್ನು ಗೆಲ್ಲಬೇಕು, ಕಷ್ಟವಾದರೂ ಗೆಲುವು ಸಾಧ್ಯವಿದೆ ಎಂದು ಶಾರೂಖ್ ಖಾನ್ ಹೇಳಿದ್ದಾರೆ.