ಬೆಂಗಳೂರು: ಐಪಿಎಲ್ ಪ್ಲೇ ಆಫ್ ನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೊರಬಿದ್ದಿದೆ. ತಂಡದ ನಿರ್ದೇಶಕರಾಗಿದ್ದ ವೀರೇಂದ್ರ ಸೆಹ್ವಾಗ್ ಗೀಗ ಬಿಡುವಿನ ಸಮಯವಾಗಿದ್ದು ಪತ್ನಿ ಜತೆ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ತೆರಳಿದ್ದ ವೀರೂ ಅಲ್ಲೂ ಸಹ ಮೊಬೈಲ್ ನಲ್ಲಿ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ.
ತಾವು ಮೊಬೈಲ್ ನಲ್ಲಿ ಮುಂಬೈ-ಪುಣೆ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯ ವೀಕ್ಷಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹಾಕಿದ್ದು ಫೋಟೋ ವೈರಲ್ ಆಗಿದೆ.
ಸೆಹ್ವಾಗ್ ಟ್ವೀಟರ್ ನಲ್ಲಿ ಪತ್ನಿ ಸಂತಸವಾಗಿದ್ದರೆ ಜೀವನ ಸುಖವಾಗಿರುತ್ತದೆ. ಚಿತ್ರಮಂದಿರದಲ್ಲಿ ಪತ್ನಿ ಸಿನಿಮಾ ನೋಡುತ್ತಿದ್ದರೆ ನಾನು ಕ್ರಿಕೆಟ್ ನೋಡುತ್ತಿದ್ದೇನೆ. ಅವಳಿಗೂ ಖುಷಿ ನನಗೂ ಖುಷಿ ಎಂದು ಬರೆದಿದ್ದಾರೆ.