ಆಫ್ಘಾನಿಸ್ತಾನ ತಂಡಕ್ಕೆ ಕೊಹ್ಲಿಯ ಹೃದಯ ಸ್ಪರ್ಶಿ ಸಂದೇಶ
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸದ್ಯ ಇದೀಗ ಕ್ರಿಕೆಟ್ ಬದುಕಿಗೆ ಗುರುತಿಸಿಕೊಳ್ಳುತ್ತಿರುವ ಆಫ್ಘಾನಿಸ್ತಾನದ ತಂಡಕ್ಕೆ ಹೃದಯ ಸ್ಪರ್ಶಿ ಸಂದೇಶವೊಂದನ್ನು...
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸದ್ಯ ಇದೀಗ ಕ್ರಿಕೆಟ್ ಬದುಕಿಗೆ ಗುರುತಿಸಿಕೊಳ್ಳುತ್ತಿರುವ ಆಫ್ಘಾನಿಸ್ತಾನದ ತಂಡಕ್ಕೆ ಹೃದಯ ಸ್ಪರ್ಶಿ ಸಂದೇಶವೊಂದನ್ನು ರವಾನಿಸಿದ್ದಾರೆ.
ಆಫ್ಘಾನಿಸ್ತಾನದ ಆಟಗಾರರು ತೋರಿಸುತ್ತಿರುವ ಉತ್ಸಾಹ ಮತ್ತು ಆಟದ ಮೇಲೆ ಅವರಿಗಿರುವ ಅಭಿಮಾನವನ್ನು ಕೊಹ್ಲಿ ಶ್ಲಾಘಿಸಿದ್ದಾರೆ.
ನಿಮ್ಮ ಟಿ20 ಪಂದ್ಯಾವಳಿಗಳಿಗೆ ನಾನು ಅಭಿನಂದಿಸುತ್ತೇನೆ. ಭವಿಷ್ಯದಲ್ಲಿ ನಿಮ್ಮ ಕ್ರಿಕೆಟ್ ಪ್ರಯಾಣ ಅತ್ಯುತ್ತಮವಾಗಿರಲಿ ಎಂದು ಬಯಸುತ್ತೇನೆ ಎಂದು ವಿಡಿಯೊವೊಂದರಲ್ಲಿ ಕೊಹ್ಲಿ ಹೇಳಿದ್ದಾರೆ.
ಕ್ರಿಕೆಟ್ ನಲ್ಲಿ ನೀವು ಏನು ಮಾಡುತ್ತಿರುವಿರಿ ಎಂಬುದನ್ನು ನೋಡಲು ನಾನು ಯಾವಾಗಲೂ ನಿಮ್ಮನ್ನು ಗಮನಿಸಿರುತ್ತೇನೆ. ನೀವು ಕ್ರಿಕೆಟ್ ಆಡುವಾಗ ನಾನು ನಿಮ್ಮ ಭಾವವನ್ನು ನೋಡಬಲ್ಲೆ. ಅದೇ ರೀತಿಯ ಭಾವೋದ್ರೇಕವನ್ನು ಜನರು ಮನೆಗಳಿಗೆ ಮರಳಿದ ನಂತರವೂ ಹಂಚಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನಿಮಗೆ ಯಶಸ್ಸು ಖಂಡಿತವಾಗಿ ಬರುತ್ತದೆ. ನೀವು ಏನು ಮಾಡುತ್ತಿದ್ದೀರಿ, ಅದನ್ನು ಪೂರ್ಣ ಉತ್ಸಾಹದಿಂದ ಮಾಡಿ ಮತ್ತು ನಿಮ್ಮ ಗುರಿಯತ್ತ ತಲುಪಲು ನಿಜವಾಗಿಯೂ ಕಷ್ಟಪಟ್ಟು ಕೆಲಸ ಮಾಡುತ್ತೀರಿ ಎಂದು ಆಫ್ಘಾನಿಸ್ತಾನ ಕ್ರಿಕೆಟಿಗರಿಗೆ ಅದ್ಭುತ ಸಂದೇಶವೊಂದನ್ನು ನೀಡಿದ್ದಾರೆ.
ಐಸಿಸಿ ಇಂಟರ್ಕಾಂಟಿನೆಂಟಲ್ ಕಪ್ ಪಂದ್ಯಾವಳಿ ಅಕ್ಟೋಬಲ್ 20-23ರವರೆಗೆ ನಡೆಯಲಿದ್ದು ಆಫ್ಗಾನಿಸ್ತಾನ ಹಾಂಗ್ ಕಾಂಗ್ ವಿರುದ್ಧ ಸೆಣೆಸಲಿದೆ.