ಕ್ರಿಕೆಟ್

ಮೊದಲ ಏಕದಿನ ಪಂದ್ಯ: ಕಿವೀಸ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

Srinivasamurthy VN
ಮುಂಬೈ: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ದದ ಏಕದಿನ ಸರಣಿ ಆರಂಭವಾಗಿದ್ದು, ಭಾನುವಾರ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇನ್ನು ಕಿವೀಸ್ ವಿರುದ್ಧ ಏಕದಿನ ಸರಣಿಯನ್ನು ವೈಟ್ ವಾಶ್ ಮೂಲಕ ಸರಣಿ ಕೈವಶ ಮಾಡಿಕೊಳ್ಳು ತವಕದಲ್ಲಿ ಭಾರತ ಇದ್ದು, ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದು 200ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದೆ.  ಹೀಗಾಗಿ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡುವುದಷ್ಟೇ ಅಲ್ಲದೇ ತಮ್ಮ ವೃತ್ತಿ ಜೀವನದ 200 ನೇ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಇಂದಿನ  ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ತಂಡಗಳು ಇಂತಿವೆ
ಭಾರತ
ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ದಿನೇಶ್ ಕಾರ್ತಿಕ್, ಕೇದಾರ್ ಜಾದವ್, ಎಂಎಸ್ ಧೋನಿ (ವಿಕೆಟ್ ಕೀಪರ್), ಹಾರ್ಡಿಕ್ ಪಾಂಡ್ಯಾ, ಭುವನೇಶ್ವರ ಕುಮಾರ್, ಕುಲ್ದೀಪ್ ಯಾದವ್, ಜಾಸ್ ಪ್ರೀತ್  ಬುಮ್ರಾ, ಯಜುವೇಂದ್ರ ಚಾಹಲ್

ನ್ಯೂಜಿಲೆಂಡ್
ಮಾರ್ಟಿನ್ ಗಪ್ಟಿಲ್, ಕೊಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಹೆನ್ರಿ ನಿಕೋಲ್ಸ್, ಕಾಲಿನ್ ಡಿ ಗ್ರಾಂಡ್ಹೋಮ್ಮೆ, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ,  ಟ್ರೆಂಟ್ ಬೌಲ್ಟ್
SCROLL FOR NEXT