ನವದೆಹಲಿ: ಐಪಿಎಲ್ ಪಂದ್ಯಾವಳಿಗಳ ಮಾಧ್ಯಮ ಹಕ್ಕುಗಳ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮಾಧ್ಯಮ ಪ್ರಸಾರ ಹಕ್ಕು ಸ್ಟಾರ್ ಇಂಡಿಯಾ ಪಾಲಾಗಿದೆ.
ಹರಾಜ್ಯ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೊತ್ತದ ಬಿಡ್ ಮಾಡಿದ್ದ ಸ್ಟಾರ್ ಇಂಡಿಯಾ 16,347.50 ರೂ.ಗಳನ್ನು ವ್ಯಯಿಸಿ ಡಿಜಿಟಲ್ ಹಾಗೂ ವಿಶ್ವದಾದ್ಯಂತ ಪ್ರಸಾರ ಮಾಡುವ ಹಕ್ಕನ್ನು ಮುಂದಿನ 5 ವರ್ಷಗಳ ಅವಧಿಗೆ ಪಡೆದುಕೊಂಡಿದೆ. ಮಾಧ್ಯಮ ಪ್ರಸಾರ ಹಕ್ಕು ಪಡೆದುಕೊಳ್ಳುವುದಕ್ಕೆ ಸೋನಿ, ಸ್ಟಾರ್ ಇಂಡಿಯಾ ನಡುವೆ ತೀವ್ರ ಪೈಪೋಟಿ ನಡೆದಿತ್ತು.
ಬಿಡ್ಡಿಂಗ್‍ನಲ್ಲಿ ಡಿಜಿಟಲ್ (ಇಂಡಿಯಾ), ಏರ್‍ಟೆಲ್, ರಿಯಲೆನ್ಸ್ ಜಿಯೋ ಸೇರಿದಂತೆ 24 ಪ್ರತಿಷ್ಠಿತ ಕಂಪೆನಿಗಳು ಪಾಲ್ಗೊಂಡಿದ್ದವು ಎಂದು ಬಿಸಿಸಿಐ ಸಿಇಒ ರಾಹುಲ್ ಜೋರಿ ತಿಳಿಸಿದ್ದಾರೆ.