ಶ್ರೀಲಂಕಾ ಪ್ರವಾಸದಲ್ಲಿರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಂಡ ಸದ್ಯ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ವೈಟ್ ವಾಷ್ ಮಾಡಿದ ಸಾಧನೆ ಮಾಡಿದೆ.
* ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಇನ್ನು ಕ್ಯಾಲೆಂಡರ್ ವರ್ಷದಲ್ಲಿ ಏಕದಿನದಲ್ಲಿ 1000 ರನ್ ಪೂರೈಸಿದ ಮೊದಲ ಆಟಗಾರ ಎನಿಸಿದ್ದಾರೆ. 2017ರಲ್ಲಿ 18 ಏಕದಿನ ಪಂದ್ಯಗಳನ್ನು ಆಡಿರುವ ಕೊಹ್ಲಿ, 92.45ರ ಸರಾಸರಿಯಲ್ಲಿ ಒಟ್ಟು 1017 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 4 ಶತಕ ಹಾಗೂ 6 ಅರ್ಧ ಶತಕ ದಾಖಲಿಸಿದ್ದಾರೆ.
* ವಿರಾಟ್ ಕೊಹ್ಲಿ 5ನೇ ಬಾರಿಗೆ ಸತತ 2 ಏಕದಿನಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.
* ಕೊಹ್ಲಿ ಲಿಸ್ಟ್ ಎ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 100ನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
* ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 3 ಏಕದಿನ ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಯನ್ನು ವೈಟ್ ವಾಷ್ ಮಾಡಿದೆ.
* ಈ ವರ್ಷ ವಿರಾಟ್ ಕೊಹ್ಲಿ 4 ಶತಗಳೂ ಚೇಸಿಂಗ್ ವೇಳೆಯೆ ದಾಖಲಾಗಿವೆ.
* ಚೇಸಿಂಗ್ ನಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಟೀಂ ಇಂಡಿಯಾದ ಅಗ್ರ ಆಟಗಾರ. ಕೊಹ್ಲಿ ಖಾತೆಯಲ್ಲಿ 19 ಶತಕಗಳು ದಾಖಲಾಗಿವೆ. ಈ ಹಿಂದೆ ಟೀಂ ಇಂಡಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಚೇಸಿಂಗ್ ನಲ್ಲಿ ಅತೀ ಹೆಚ್ಚು ಶತಕಗಳು ಸಿಡಿಸಿದ್ದರು. ಸಚಿನ್ ಚೇಸಿಂಗ್ ವೇಳೆ 17 ಶತಕಗಳನ್ನು ಸಿಡಿಸಿದ್ದರು.
* ವಿರಾಟ್ ಕೊಹ್ಲಿ 30ನೇ ಶತಕ ಸಿಡಿಸಿರುವ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನು ಅತೀ ಕಡಿಮೆ ಇನ್ನಿಂಗ್ಸ್ ನಲ್ಲಿ 30ನೇ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics