ಕೊಲಂಬೋ: ಕೊಲಂಬೋದಲ್ಲಿರುವ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಲಂಕಾ ನಡುವಿನ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ ಭಾರತಕ್ಕೆ ಗೆಲ್ಲಲು 171 ರನ್ ಗಳ ಗುರಿ ನೀಡಿದೆ.
ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡ ಶ್ರೀಲಂಕಾ ತಂಡ ಭಾರತದ ವಿರುದ್ಧ 170 ರನ್ ಗಳನ್ನು ಗಳಿಸಿದೆ. 10 ಓವರ್ ಗಳ ವೇಳೆಗೆ 3 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ 90 ರನ್ ಗಳನ್ನು ಗಳಿಸಿತ್ತು. ದಿಲ್ಶನ್ ಮುನವೀರ ಟಿ20 ಆವೃತ್ತಿಯಲ್ಲಿ ಮೊದಲ ಅರ್ಧಶತಕ ದಾಖಲಿಸಿದರು.