ಚೆನ್ನೈಗೆ ಮರಳಿದ 'ಕಿಂಗ್' ಎಂಎಸ್ ಧೋನಿ!
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿ ಮೂಲದವರಾದರೂ ಚೆನ್ನೈ ಅವರು ಎರಡನೇ ತವರು. 2008ರಿಂದ ಆರಂಭವಾದ...
ಚೆನ್ನೈ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಾಂಚಿ ಮೂಲದವರಾದರೂ ಚೆನ್ನೈ ಅವರು ಎರಡನೇ ತವರು. 2008ರಿಂದ ಆರಂಭವಾದ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಿಂದಾಗಿ ಧೋನಿಗೆ ಚೆನ್ನೈ ನಂಟು ಶುರವಾಗಿತ್ತು.
ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿದ್ದ ಧೋನಿಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದ ವೇಳೆ ಅದ್ಧೂರಿ ಸ್ವಾಗತ ದೊರೆಯಿತು. ಧೋನಿ ಬ್ಯಾಟ್ ಹಿಡಿದು ಮೈದಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಕ್ರೀಡಾಂಗಣದಲ್ಲಿ ನರೆದಿದ್ದ ಅಭಿಮಾನಿಗಳು ಎದ್ದು ನಿಂತು ಧೋನಿ...ಧೋನಿ ಎಂದು ಹರ್ಷೋದ್ಘಾರ ಮಾಡಿದರು.
ಆರಂಭಿಕ ಆಘಾತದ ಒತ್ತಡದಲ್ಲಿದ್ದ ಧೋನಿಗೆ ಅಭಿಮಾನಿಗಳ ಭವ್ಯ ಸ್ವಾಗತ ಧೋನಿಗೆ ಮತ್ತಷ್ಟು ಸ್ಫೂರ್ತಿ ತುಂಬಿತು. ಈ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು ಚೆನ್ನೈಗೆ ಕಿಂಗ್ ಧೋನಿ ಮರಳಿದ್ದಾರೆ ಎಂದು ಬರೆದಿದೆ.
2018ರ ಐಪಿಎಲ್ ಗೆ ಚೆನ್ನೈ ತಂಡ ವಾಪಸಾಗುತ್ತಿದ್ದು ಧೋನಿಯೇ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವ ವಿಶ್ವಾಸ ಕ್ರಿಕೆಟ್ ಅಭಿಮಾನಿಗಳಿಗಿದೆ.