ಹ್ಯಾಟ್ರಿಕ್ ವಿಕೆಟ್ ಪಡೆದ ಕುಲದೀಪ್ ಯಾದವ್
ಕೋಲ್ಕತಾ: ಈಡನ್ ಗಾರ್ಡನ್ ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಆಸಿಸ್ ಸೋಲಿಗೆ ಕಾರಣರಾದ ಕುಲದೀಪ್ ಯಾದವ್ ಇದೀಗ ಐತಿಹಾಸಿಕ ಸಾಧನೆಗೆ ಪಾತ್ರರಾಗಿದ್ದಾರೆ.
ಚೈನಾಮ್ಯಾನ್ ಖ್ಯಾತಿಯ ಕುಲ್‌ದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ (54/3) ಸಾಧನೆಯ ನೆರವಿನಿಂದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ 50 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಆ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಭಾರತೀಯ ಸ್ಪಿನ್ನರ್ ಎಂಬ ಕೀರ್ತಿಗೆ ಕುಲದೀಪ್ ಯಾದವ್ ಭಾಜನರಾಗಿದ್ದು, ಒಟ್ಟಾರೆ ಹ್ಯಾಟ್ರಿಕ್ ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇದಕ್ಕೂ ಮೊದಲ 1987ರಲ್ಲಿ ನಾಗಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಚೇತನ್ ಶರ್ಮಾ ಹ್ಯಾಟ್ರಿಕ್ ವಿಕೆಟ್ ಸಾಧನೆಗೈದು, ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದರು. ಬಳಿಕ 1991ರಲ್ಲಿ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಈ ಸಾಧನೆ ಗೈದಿದ್ದರು. ಬಳಿಕ ಸುಮಾರು 26 ವರ್ಷಗಳ ಬಳಿಕ ಕುಲದೀಪ್ ಯಾದವ್ ಬಲಿಷ್ಟ ಆಸ್ಚ್ರೇಲಿಯಾ ವಿರುದ್ಧ ಈ ಸಾಧನೆ ಗೈದಿದ್ದಾರೆ. ಕುಲದೀಪ್ ಏಕದಿನದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು ಗಮನಾರ್ಹವಾಗಿದ್ದು, ಏಕದಿನ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಭಾರತೀಯ ಸ್ಪಿನ್ನರ್ ಎಂಬ ಕೀರ್ತಿಗೆ ಕುಲದೀಪ್ ಭಾಜನರಾಗಿದ್ದಾರೆ.
ಒಂದು ಹಂತದಲ್ಲಿ ಪಂದ್ಯ ಭಾರತದ ಕೈತಪ್ಪುವ ಅಪಾಯದಲ್ಲಿತ್ತು. ಪಂದ್ಯದ 33ನೇ ಓವರ್ ನ 2ನೇ ಎಸೆತದಲ್ಲಿ ವೇಡ್ ರನ್ನು ಬೋಲ್ಜ್ ಮಾಡಿದರು. ಬಳಿಕ ಕ್ರೀಸ್ ಗೆ ಆಗಮಿಸಿದ ಅಗರ್ ಎಲ್ ಬಿ ಬಲೆಗೆ ಬಿದ್ದರೆ, ಮೂರನೇ ವಿಕೆಟ್ ರೂಪದದಲ್ಲಿ ಕ್ಯಮಿನ್ಸ್ ಬಲಿಯಾದರು. ಕುಲದೀಪ್ ಗೆ ಹ್ಯಾಟ್ರಿಕ್ ನೀಡಬಾರದು ಎಂಬ ಉದ್ದೇಶದಿಂದ ಕ್ಯುಮಿನ್ಸ್ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದರಾದರೂ ಕುಲದೀಪ್ ಎಸೆದ ಚೆಂಡು ಕ್ಯುಮಿನ್ಸ್ ಬ್ಯಾಟ್ ನ ಅಂಚಿಗೆ ಸವರಿ ನೇರ ಧೋನಿ ಕೈ ಸೇರಿತ್ತು. ಆ ಮೂಲಕ ಕುಲದೀಪ್ ಏಕದಿನ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಸಾಧನೆ ಗೈದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.