ಐಪಿಎಲ್ 2018: ಮಳೆ ಅಡ್ಡಿ, ರಾಜಸ್ಥಾನ-ಡೆಲ್ಲಿ ಪಂದ್ಯ ಸ್ಥಗಿತ
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಸರಣಿಯಲ್ಲಿ ರಾಜಸ್ಥಾನ ರಾಯಲ್ಸ್ - ಡೆಲ್ಲಿ ಡೇರ್ ಡೆವಿಲ್ಸ್ ಪಂದ್ಯಕ್ಕೆ ವರುಣ ಅಡ್ಡಿಯಾಗಿದ್ದಾನೆ.
ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಮಳೆ ಬಂದ ಕಾರಣ ಪಂದ್ಯ ಸ್ಥಗಿತಗೊಂಡಿದೆ.
ರಾಜಸ್ಥಾನ ರಾಯಲ್ಸ್ ತಂಡ 17.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿದ್ದ ವೇಳೆ ಮಳೆ ಪ್ರಾರಂಬಗೊಂಡು ಪಂದ್ಯ ಸ್ಥಗಿತವಾಗಿದೆ.
ಮಳೆಗೆ ಮುನ್ನ ಬ್ಯಾಟಿಂಗ್ ಪ್ರಾರಂಭಿಸಿದ್ದ ರಾಜಸ್ಥಾನ ರಾಯಲ್ಸ್ ತಂಡದ ಪ್ರಾರಂಬ ಅಷ್ಟೇನೂ ಉತ್ತಮವಾಗಿರಲಿಲ್ಲ. ಡಾರ್ಸಿ ಶಾರ್ಟ್ ಕೇವಲ 6 ರನ್ ಗಳಿಸುವಷ್ಟರಲ್ಲಿ ರನೌಟ್ ಆಗಿ ನಿರಾಶೆ ಮುಡಿಸಿದ್ದರು.
ಇನ್ನು ಉಳಿದಂತೆ ಬೆನ್ ಸ್ಟೋಕ್ಸ್ (16), ಸಂಜು ಸ್ಯಾಮ್ಸನ್ (37), ಜಾಸ್ ಬಟ್ಲರ್ (29), ರಾಹುಲ್ ತ್ರಿಪಾಠಿ (15) ರನ್ ಕಲೆಹಾಕಿದ್ದರು.
ತಂಡದ ನಾಯ ಅಜಿಂಕ್ಯ ರಹಾನೆ ಮಾತ್ರ ಉತ್ತಮ ಫಾರ್ಮನಲ್ಲಿದ್ದು 40 ಎಸೆತಗಳಲ್ಲಿ 45 ರನ್ ಗಳಿಸಿದ್ದರು.
ಡೆಲ್ಲಿ ಪರವಾಗಿ ಷಹಬಾಜ್ ನದೀಮ್ 2 ವಿಕೆಟ್, ಮೊಹಮ್ಮದ್ ಶಮಿ, ಟಿ.ಬೋಲ್ಟ್ ತಲಾ ಒಂದು ವಿಕೆಟ್ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics