ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

2019ರ ವಿಶ್ವಕಪ್: ಟೀಂ ಇಂಡಿಯಾಗೆ ಆರಂಭಿಕ ಎದುರಾಳಿ ದಕ್ಷಿಣ ಆಫ್ರಿಕಾ

2019ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಮೇ 30ರಿಂದ ಆರಂಭಗೊಳ್ಳುತ್ತಿದ್ದು ಈ ಹಿಂದೆ ಅಂದುಕೊಂಡಂತೆ ಟೀಂ ಇಂಡಿಯಾ ಜೂನ್ 2ರಂದು ಆಡಬೇಕಿತ್ತು...

ಟೀಂ ಇಂಡಿಯಾ
Vishwanath S
Updated On : 24 Apr 2018, 7:50 am
2019ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಮೇ 30ರಿಂದ ಆರಂಭಗೊಳ್ಳುತ್ತಿದ್ದು ಈ ಹಿಂದೆ ಅಂದುಕೊಂಡಂತೆ ಟೀಂ ಇಂಡಿಯಾ ಜೂನ್ 2ರಂದು ಆಡಬೇಕಿತ್ತು. ಆದರೆ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ಗಾಗಿ ಟೀಂ ಇಂಡಿಯಾದ ವೇಳಾ ಪಟ್ಟಿ ಬದಲಾಗಿದೆ. 
ಮೂಲ ವೇಳಾಪಟ್ಟಿ ಪ್ರಕಾರ ಟೀಂ ಇಂಡಿಯಾ ಜೂನ್ 2ರಂದು ಮೊದಲ ಪಂದ್ಯವನ್ನು ಆಡಬೇಕಿತ್ತು. ಆದರೆ ಐಪಿಎಲ್ ಪಂದ್ಯಾವಳಿ ಮಾರ್ಚ್ 29 ರಿಂದ ಮೇ 19ರ ನಡುವೆ ನಡೆಯುವುದರಿಂದ ಐಪಿಎಲ್ ನಲ್ಲಿ ಆಡಿರುವ ಟೀಂ ಇಂಡಿಯಾ ಆಟಗಾರರಿಗೆ ಕನಿಷ್ಠ 15 ದಿನಗಳ ವಿಶ್ರಾಂತಿ ಅವಶ್ಯಕತೆ ಇದ್ದು ಈ ಹಿನ್ನೆಲೆಯಲ್ಲಿ ಜೂನ್ 2ರ ಬದಲಿಗೆ ಜೂನ್ 5ರಂದು ಭಾರತ ಮೊದಲ ಪಂದ್ಯ ಆಡಲಿದೆ. 
ಒಂದು ಟೂರ್ನಿಯಿಂದ ಮತ್ತೊಂದು ಟೂರ್ನಿಗೆ ಕನಿಷ್ಠ 15 ದಿನ ವಿಶ್ರಾಂತಿ ನೀಡಬೇಕು ಎಂಬ ಲೋಧಾ ಸಮಿತಿ ಶಿಫಾರಸ್ಸು ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈ ತೀರ್ಮಾನಕ್ಕೆ ಬಂದಿದೆ. 

Advertisement

Advertisement

2019ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಮೇ 30ರಿಂದ ಪ್ರಾರಂಭಗೊಳ್ಳಲಿದ್ದು ಈ ಬಾರಿ ಇಂಗ್ಲೆಂಡ್ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಬಾರಿ ಹತ್ತು ತಂಡಗಳು ಟೂರ್ನಿಯಲ್ಲಿ ಆಡಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement