2008ರಲ್ಲಿ ಗಂಗೂಲಿಗೆ, 2018ರಲ್ಲಿ ಕೊಹ್ಲಿಗೆ ಮಹಾ ಮೋಸ;? ನೆಟಿಗರು ಆಕ್ರೋಶ, ವಿಡಿಯೋ ವೈರಲ್!
2008ರ ಸಿಡ್ನಿ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಪಿಚ್ ಕ್ಯಾಚ್ ಹಿಡಿದಿದ್ದು ವಿವಾದಕ್ಕೆ...
ಪರ್ತ್: 2008ರ ಸಿಡ್ನಿ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಪಿಚ್ ಕ್ಯಾಚ್ ಹಿಡಿದಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅದೇ ರೀತಿಯ ಮೋಸ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೂ ಜರುಗಿದೆ.
ಹೌದು ಪರ್ತ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ(123) ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು. ಈ ವೇಳೆ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಸ್ಲಿಪ್ ನಲ್ಲಿದ್ದ ಹ್ಯಾಂಡ್ಸ್ ಕ್ಯೂಬ್ ಗೆ ಕೊಹ್ಲಿ ಕ್ಯಾಚ್ ನೀಡಿದರು.
ಕ್ಯಾಚ್ ಪಡೆದ ಹ್ಯಾಂಡ್ಸ್ ಕ್ಯೂಬ್ ಔಟ್ ಎಂದು ಹೇಳಿದ್ದರೂ ಕೊಹ್ಲಿ ಮಾತ್ರ ಔಟಲ್ಲ ಎಂದು ತಲೆಯಾಡಿಸಿದ್ದರು. ಅಂಪೈರ್ ರಿಪ್ಲೇಯಲ್ಲಿ ಗಮನಿಸಿದಾಗ ಅದು ನಾಟೌಟ್ ಎಂದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆದರೆ ಅಂಪೈರ್ ಔಟ್ ನೀಡಿದ್ದರು.
ಸದ್ಯಕ್ಕೆ ಅಂಪೈರ್ ಮೋಸದ ಔಟ್ ನಿರ್ಧಾರ ಟ್ವೀಟರ್ ನಲ್ಲಿ ಭಾರೀ ಅಕ್ರೋಶ ವ್ಯಕ್ತವಾಗಿದೆ. ಚೆಂಡು ನೆಲಕ್ಕೆ ತಾಗಿದ್ದು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ ಅಂಪೈರ್ ಔಟ್ ನೀಡಿದ್ದು ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ ಎಂದು ನೆಟಿಗರು ಆಕ್ರೋಶ ಹೊರಹಾಕಿದ್ದಾರೆ.
2008ರ ಸಿಡ್ನಿ ಟೆಸ್ಟ್ ನಲ್ಲಿ ಸೌರವ್ ಗಂಗೂಲಿ ಸಿಡಿಸಿದ ಚೆಂಡನ್ನು ಸ್ಪಿಪ್ ನಲ್ಲಿದ್ದ ಮೈಕಲ್ ಕ್ಲಾರ್ಕ್ ಹಿಡಿದಿದ್ದರು. ಆದರೆ ಚೆಂಡು ನೆಲಕ್ಕೆ ತಾಕಿತ್ತು. ಇದರಿಂದಾಗಿ ಗಂಗೂಲಿ ನಾಟೌಟ್ ಎಂದು ಅಲ್ಲೇ ನಿಂತಿದ್ದರು. ಆದರೆ ಅಂಪೈರ್ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಮಾತು ಕೇಳಿ ಔಟ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.
Virat Kohli given out on a Controversial Catch!