ಕ್ರಿಕೆಟ್

2019 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡದ ಟಾಪ್ 5 ತಂಡಗಳು!

Vishwanath S
2019ರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಎಲ್ಲಾ ಕ್ರಿಕೆಟ್ ತಂಡಗಳು ಕಸರತ್ತು ನಡೆಸುತ್ತಿವೆ. ಆ ಮಧ್ಯೆ ಕೆಲ ಬಲಿಷ್ಠ ತಂಡಗಳೂ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆಡದೆ ಇರುವುದು ಸೋಜಿಗವೇ ಸರಿ. 
ಹೌದು, ಈ ಬಾರಿ ಐರ್ಲೆಂಡ್, ಜಿಂಬಾಬ್ವೆ, ನೆದರ್ ಲ್ಯಾಂಡ್, ಕೀನ್ಯಾ ತಂಡಗಳು ಟೂರ್ನಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿವೆ. 
ಐರ್ಲೆಂಡ್
2007ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಬಲಿಷ್ಠ ತಂಡಗಳಿಗೆ ಐರ್ಲೆಂಡ್ ಸವಾಲೊಡ್ಡಿತ್ತು. 2011ರಲ್ಲಿ ಇಂಗ್ಲೆಂಡ್ ಹಾಗೂ 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಐರ್ಲೆಂಡ್ ಐತಿಹಾಸಿಕ ಗೆಲುವು ಸಾಧಿಸಿತ್ತು. ಇದು ಐರ್ಲೆಂಡ್ ತಂಡಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಆದರೆ 2017ರಲ್ಲಿ ನಡೆದ ವಿಶ್ವಕಪ್ ಅರ್ಹತಾ ಪಂದ್ಯಯಲ್ಲಿ ಐರ್ಲೆಂಡ್ ಆಫ್ಘಾನಿಸ್ತಾನ ವಿರುದ್ಧ ಸೋಲು ಕಂಡಿತ್ತು. ಇದರೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ
ಜಿಂಬಾಬ್ವೆ
90ರ ದಶಕದಲ್ಲಿ ಬಲಿಷ್ಠ ತಂಡವಾಗಿದ್ದ ಜಿಂಬಾಬ್ವೆ 1983ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನೇ ಸೋಲಿಸಿತ್ತು. 1992ರಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ತನ್ನ ಸತ್ತಾ ತೋರಿಸಿತ್ತು. ಇದಾದ ನಂತರ ಕ್ರಮೇಣ ಜಿಂಬಾಬ್ವೆ ತಂಡದ ಪ್ರದರ್ಶನ ಕುಂಠಿಗೊಂಡಿತ್ತು. 2019ರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಯುಎಇ ತಂಡದ ವಿರುದ್ಧ ಸೋತು ಟೂರ್ನಿಯಿಂದ ಹೊರಬಂದಿತ್ತು.
ಕೀನ್ಯಾ
2003ರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಕೀನ್ಯಾ ಬಳಿಕ ನಡೆದ ವಿಶ್ವಕಪ್ ಟೂರ್ನಿಗಳಲ್ಲಿ ಕೀನ್ಯಾ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ. 
ದಿ ನೆದರ್ಲಾಂಡ್
2011ರ ವಿಶ್ವಕಪ್ ನಲ್ಲಿ ಉತ್ತಮವಾಗಿ ಆಡಿದ್ದ ನೆದರ್ಲಾಂಡ್ ತಂಡ ನಂತರದ ಟೂರ್ನಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿತ್ತು. ಇನ್ನು 2019ರ ವಿಶ್ವಕಪ್ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ನೆದರ್ಲ್ಯಾಂಡ್ ಯುಎಇ ವಿರುದ್ಧ ಸೋಲು ಕಂಡಿದೆ
ಸ್ಕಾಟ್ಲ್ಯಾಂಡ್
1999, 2007 ಮತ್ತು 2015ರಲ್ಲಿ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದ ಸ್ಕಾಟ್ಲ್ಯಾಂಡ್ ತಂಡ ಈ ಬಾರಿಯು ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ.
SCROLL FOR NEXT