ವಿಕೆಟ್ ಪಡೆದ ಸಂಭ್ರಮದಲ್ಲಿ ನಗರಕೋಟಿ
ಬೇಓವಲ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದೆ.
ಟಾಸ್ ಗೆದ್ದ ಆಸಿಸ್ ನಾಯಕ ಜೇಸನ್ ಸಂಘಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆಸಿಸ್ ಪರ ಬ್ಯಾಟಿಂಗ್ ಗೆ ಇಳಿದ ಆರಂಭಿಕರಾದ ಜಾಕ್ ಎಡ್ವರ್ಡ್ಸ್ (28ರನ್)ಹಾಗೂ ಮ್ಯಾಕ್ಸ್ ಬ್ರ್ಯಾಂಟ್ (14 ರನ್) ಉತ್ತಮ ಆರಂಭ ನೀಡುವ ಮುನ್ಸೂಚನೆ ನೀಡಿತ್ತಾದರೂ, ಈ ಹಂತದಲ್ಲಿ ದಾಳಿಗಿಳಿದ ಭಾರತದ ಇಶಾನ್ ಪೋರಲ್ ಆರಂಭಿಕರಿಬ್ಬರನ್ನೂ ಪೆವಿಲಿಯನ್ ಅಟ್ಟಿದರು. ಬಳಿಕ ಬಂದ ನಾಯಕ ಜೇಸನ್ ಸಂಘಾರನ್ನು ಭಾರತದ ಬೌಲರ್ ನಗರಕೋಟಿ ಔಟ್ ಮಾಡಿದರು. ಆಸಿಸ್ ಪಡೆಯ ಬ್ಯಾಟಿಂಗ್ ಬೆನ್ನೆಲುಬಾಗಿದ್ದ ಸಂಘಾ ಕೇವಲ 13 ರನ್ ಗಳಿಸಿ ನಿರ್ಗಮಿಸಿದರು.
ಬಳಿಕ ಪರಂ ಉಪ್ಪಾಳ್ ಕೂಡ 13 ರನ್ ಗಳಿ ಅಂಕುಲ್ ರಾಯ್ ಗೆ ವಿಕೆಟ್ ಒಪ್ಪಿಸಿದರು. ಒಂದಡೆ ವಿಕೆಟ್ ಬೀಳುತ್ತಿದ್ದರೆ ಮತ್ತೊಂದೆ ಆಸಿಸ್ ನ ಮಧ್ಯಮ ಕ್ರಮಾಂಕದ ಆಟಗಾರ ಜೋನಾಥನ್ ಮರ್ಲೋ ಗಡ್ಡಿಯಾಗಿ ಕ್ರೀಸ್ ನಲ್ಲಿ ನಿಂತಿದ್ದು, ಅರ್ಧಶತಕ ಗಳಿಸಿದ್ದಾರೆ. ಮರ್ಲೋ ಗೆ ನಥನ್ ಮೆಕ್ ಸ್ವೀನೆ ಉತ್ತಮ ಸಾಥ್ ನೀಡುತ್ತಿದ್ದು, ಅವರು 14 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ ತಂಡ 37 ಓವರ್ ಗೆ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿದೆ. ಭಾರತದ ಪರ ಇಶಾನ್ ಪೊರೆಲ್ 2 ವಿಕೆಟ್ ಗಳಿಸಿದ್ದು, ನಗರಕೋಟಿ ಮತ್ತು ಅನುಕುಲ್ ರಾಯ್ ತಲಾ ವಿಕೆಟ್ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics