ಸೆಂಚೂರಿಯನ್: ಪ್ರವಾಸಿ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ 118 ರನ್ ಗಳಿಗೆ ಆಲೌಟ್ ಆಗಿದೆ.
ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ ಯಜುವೇಂದ್ರ ಚಹಾಲ್ ಹಾಗೂ ಕುಲ್ತೀಪ್ ಯಾದವ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ್ದು 118 ರನ್ ಗಳ ಅಲ್ಪಮೊತ್ತಕ್ಕೆ ತಂಡ ಸರ್ವಪತನ ಕಂಡಿದೆ.
ಆಫ್ರಿಕಾ ಪರ ಹಾಶೀಂ ಆಮ್ಲಾ 23, ಡಿ ಕಾಕ್ 20, ಜೋಂಡಾ 25, ಮಾರ್ಕ್ರಮ್ 8, ಜೆಪಿ ಡುಮಿನಿ 25, ಮಿಲ್ಲರ್ 0, ಮೋರಿಸ್ 14, ರಬಾಡ 1, ಮಾರ್ಕೆಲ್ 1 ರನ್ ಪೇರಿಸಿದ್ದಾರೆ.
ಭಾರತ ಪರ ಬೌಲಿಂಗ್ ನಲ್ಲಿ ಯಜುಂದ್ರರ್ ಚಹಾಲ್ 5, ಕುಲದೀಪ್ ಯಾದವ್ 3, ಭುವನೇಶ್ವರ್ ಕುಮಾರ್ ಮತ್ತು ಬೂಮ್ರಾ ತಲಾ 1 ವಿಕೆಟ್ ಪಡೆದಿದ್ದಾರೆ.