ಜೋಹಾನ್ಸ್‌ಬರ್ಗ್: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಆರು ಪಂದ್ಯಗಳ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದು ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ತಂಡಕ್ಕೆ ಮರಳಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಡಿವಿಲಿಯರ್ಸ್ ಆರಂಭಿಕ ಮೂರು ಪಂದ್ಯಗಳಿಂದ ದೂರ ಉಳಿದಿದ್ದರು. ಅಲ್ಲದೆ ಇತರ ಸ್ಟಾರ್ ಆಟಗಾರರು ಸಹ ಗಾಯ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದು ಟೀಂ ಇಂಡಿಯಾದ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ತಂಡ ಹೀನಾಯವಾಗಿ ಸೋಲು ಕಂಡಿದೆ.
ಡಿವಿಲಿಯರ್ಸ್ ಆಗಮನದ ಹಿನ್ನೆಲೆಯಲ್ಲಿ ತಂಡಕ್ಕೆ ಸ್ವಲ್ಪ ಚೇತರಿಕೆ ಸಿಕ್ಕಂತಾಗಿದೆ. ಶನಿವಾರ ವಾಂಡರರ್ಸ್ ನಲ್ಲಿ ನಾಲ್ಕನೇ ಏಕದಿನ ಪಂದ್ಯ ನಡೆಯಲಿದ್ದು ಇಂದಿನ ಅಭ್ಯಾಸದಲ್ಲಿ ಡಿವಿಲಿಯರ್ಸ್ ಪೂರ್ಣ ಪ್ರಮಾಣದಲ್ಲಿ ಕಸರತ್ತು ನಡೆಸಿದರೇ ಮಾತ್ರ ನಾಳಿನ ಪಂದ್ಯದಲ್ಲಿ ಆಡಲಿದ್ದಾರೆ.
ವಾಂಡರರ್ಸ್ ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಇದರಿಂದಾಗಿ ಭಾರತ ವಿರುದ್ಧದ ಆರಂಭಿಕ ಮೂರು ಏಕದಿನ ಪಂದ್ಯದಿಂದ ದೂರ ಉಳಿದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics