ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ದ. ಆಫ್ರಿಕಾ ವಿರುದ್ಧದ ಅಂತಿಮ ಟಿ20, ಟಾಸ್ ಗೆದ್ದ ಅತಿಥೇಯರಿಂದ ಫಿಲ್ಡಿಂಗ್ ಆಯ್ಕೆ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.

ದ. ಆಫ್ರಿಕಾ ವಿರುದ್ಧದ ಅಂತಿಮ ಟಿ20, ಟಾಸ್ ಗೆದ್ದ ಆಫ್ರಿಕಾದಿಂದ ಫಿಲ್ಡಿಂಗ್ ಆಯ್ಕೆ
Raghavendra Adiga
Updated On : 24 Feb 2018, 11:00 am
ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
ವಿಶೇಷವೆಂದರೆ ಈ ಪಂದ್ಯದಲ್ಲಿ ನಾಯಕ ಕೊಹ್ಲಿ ಆಡುತ್ತಿಲ್ಲ. ಬೆನ್ನುನೋವಿನಿಂದ ಬಳಲುತ್ತಿರುವ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.ಇದರೊಡನೆ ಕೊಹ್ಲಿ ಬದಲಾಗಿ ದಿನೇಶ್ ಕಾರ್ತಿಕ್ ತಂಡಕ್ಕೆ ಮರಳಿದ್ದಾರೆ.
ಇನ್ನು ಭಾರತದ ಭರವಸೆ ಆಟಗಾರ ಜಸ್ಪ್ರೀತ್ ಬುಮ್ರಾ ಮತ್ತು ಅಕ್ಸರ್‌ ಪಟೇಲ್‌ ತಂಡಕ್ಕೆ ಸೇರ್ಪಡೆಯಾಗಿದ್ದು  ಚಹಲ್‌ ಹಾಗೂ ಜೈದೇವ್‌ ಉನದ್ಕಟ್‌ ಅವರುಗಳನ್ನು ಕೈಬಿಡಲಾಗಿದೆ.

Advertisement

Advertisement

ಇದಾಗಲೇ ಏಕದಿನ ಸರಣಿಯನ್ನು ಗೆದ್ದಿರುವ ಭಾರತ ಟಿ20 ಯಲ್ಲಿಯೂ ಪಾರಮ್ಯ ಮೆರೆಯಲು ಹವಣಿಸುತ್ತಿದೆ. ಆದರೆ ವಿರಾಟ್ ಕೊಹ್ಲಿ ಇಲ್ಲದಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಬಹುದೊಡ್ಡ ನಿರಾಶೆಯಾಗಿದೆ.
ಮೂರು ಟಿ20 ಪಂದ್ಯಗಳಲ್ಲಿ ಎರಡೂ ತಂಡಗಳು ಒಂದೊಂದು ಪಂದ್ಯಗಳನ್ನು ಗೆದ್ದಿದ್ದು ಇತ್ತಂಡಗಳಿಗೆ  ಈ ಪಂದ್ಯ ಅತ್ಯಂತ ಮಹತ್ವದ್ದೆನಿಸಿದೆ. 
ಇದೇ ವೇಳೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸಹ ಎರಡು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು ಜೆ.ಜೆ. ಸ್ಮಟ್ಸ್ ಮತ್ತು ಡೇನ್ ಪ್ಯಾಟರ್ಸನ್ ಅವರುಗಳ ಬದಲಿಗೆ ಕ್ರಿಸ್ಟಿಯಾನ್ ಜೊಂಕರ್ ಆರೋನ್ ಫಾಂಗಿಸೊ ಅವರುಗಳನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement