ಕ್ರಿಕೆಟ್

ಅಂತಿಮ ಟಿ20ಯಲ್ಲಿ ಭಾರತಕ್ಕೆ 7 ರನ್ ಗಳ ಜಯ, 2-1ರಿಂದ ಸರಣಿ ಕೈವಶ

Raghavendra Adiga
ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಾವಳಿಯಲ್ಲಿ ಭಾರತ ಏಳು ರನ್ ಗಳಿಂದ ಜಯ ಸಾಧಿಸಿದೆ. ಈ ಮೂಲಕ ಭಾರತಕ್ಕೆ 2-1 ಅಂತರದಲ್ಲಿ ಸರಣಿ ಒಲಿದಿದೆ ಇದರೊಡನೆ ಏಕದಿನದ ಬಳಿಕ ಟಿ20 ಸರಣಿಯನ್ನೂ ಭಾರತ ತನ್ನ ಕೈವಶ ಮಾಡಿಕೊಂಡಂತಾಗಿದೆ. 
ಅತಿಥೇಯರ ಪರ ಆಫ್ರಿಕಾ ನಾಯಕ ಡುಮಿನಿ 55 ರನ್ ಗಳಿಸಿದರೆ ಕ್ರಿಸ್ಟಿಯಾನ್ ಜೋಂಕರ್ 49 ರನ್ ಸಿಡಿಸಿದ್ದರು. ಇನ್ನು ಡೇವಿಡ್ ಮಿಲ್ಲರ್ 24, ಫಾರನ್ ಬೆಹಾರ್ಡಿಯನ್ 15 ರನ್ ಗಳಿಸಿದ್ದರು.  ಒಟ್ಟಾರೆ ದಕ್ಷಿಣ ಆಫ್ರಿಕಾ ತಾನು ನಿಗದಿತ ಓವರ್ ಗಳಲ್ಲಿ 65/6 ರನ್ ಗಳಿಸಲಷ್ಟೇ ಸಾಧ್ಯವಾಗುತ್ತದೆ. 
ಭಾರತದ ಪರ ಭುವನೇಶ್ವರ ಕುಮಾರ್ ಎರಡು ವಿಕೆಟ್ ಪಡೆದು ಮಿಂಚಿದರು.
ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸುರೇಶ್ ರೈನಾ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ತನ್ನದಾಗಿಸಿಕೊಂಡರು. ಭುವನೇಶ್ವರ ಕುಮಾರ್ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
SCROLL FOR NEXT